ಯಕ್ಷ ಇತಿಹಾಸದಲ್ಲೆ ಹವ್ಯಾಸಿ ಯಕ್ಷ ಸೌರಭದ ಯಕ್ಷ ಸಪ್ತಾಹ ಆ.25ರಿಂದ31ರ ತನಕ ಸಾಲಿಗ್ರಾಮ ದೇಗುಲದಲ್ಲಿ ಆಯೋಜನೆ

0
169

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಇದೇ ಮೊದಲ ಬಾರಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ನಿರಂತರ ಒಂದು ವಾರಗಳ ಕಾಲ ಯಕ್ಷಗಾನ ಸಪ್ತಾಹ ಆಯೋಜಿಸಿದ್ದು ಯಕ್ಷ ಇತಿಹಾಸದಲ್ಲಿ ಹವ್ಯಾಸಿ ಯಕ್ಷ ಬಳಗ ತಂಡವೊಂದು ಜಿಲ್ಲೆಯಲ್ಲಿ ಯಕ್ಷ ಸಪ್ತಾಹ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಕಳೆದ ಹಲವು ವರ್ಷಗಳ ಇತಿಹಾಸವಿರುವ ಕೋಟದ ಹಿರೇ ಮಹಾಲಿಂಗೇಶ್ವರ ದೇಗುಲದಲ್ಲಿ ಯಕ್ಷ ಕಲಿಕಾ ಕೇಂದ್ರದ ಮೂಲಕ ಹುಟ್ಟಿಕೊಂಡ ಯಕ್ಷಗಾನ ಸಂಘವೊಂದು ಯಕ್ಷ ಕಲೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಯುವ ಆಸಕ್ತ ಮನಸ್ಸುಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ.

Click Here

ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಹೆಸರಿನೊಂದಿಗೆ ವರ್ಷವಿಡೀ ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ನೀಡಿ ಹೊಸ ತಲೆಮಾರಿಗೆ ಯಕ್ಷಗಾನದ ಅಭಿರುಚಿ ಬೆಳೆಸುವ ಕೈಂಕರ್ಯದಲ್ಲಿ ನಿರತರಾಗಿದೆ.

ಅದೇ ಯಕ್ಷ ಸೌರಭಕ್ಕೆ ಇದೀಗ ದಶಮ ಸಂಭ್ರಮದ ಹೊಸ್ತಿಲು, ಈ ದಿಸೆಯಲ್ಲಿ ಇದೇ ಆ.25ರಿಂದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಭಾಂಗಣದಲ್ಲಿ ಒಂದು ವಾರಗಳ ಕಾಲ ಶ್ರಾವಣ ಮಾಸದ ವಿಶೇಷತೆಯ ಭಾಗವಾಗಿ ಸೌರಭ ಸಪ್ತಮಿ ಶೀರ್ಷಿಕೆಯಡಿ ಯಕ್ಷ ಸಪ್ತಾಹ ಹಮ್ಮಿಕೊಂಡಿದ್ದು ನಾಳೆ( ಆ.25) ಚಾಲನೆ ದೊರಯಲಿದೆ.ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಣ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ.ಕೀರ್ತಿಶೇಷ ಹಂದಾಡಿ ಬಾಲಕೃಷ್ಣ ನಾಯಕ್ ಸಂಸ್ಮರಣೆ,ಹಾಗೂ ನುಡಿನಮನ ಕಾರ್ಯಕ್ರಮಗಳ ನಡೆಯಲಿದೆ.

ವಾರವಿಡೀ ಯಕ್ಷರಾತ್ರಿ ಕಾರ್ಯಕ್ರಮಗಳ ವಿವರ
ಯಕ್ಷಸೌರಭ ಕಲಾರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ನೇತೃತ್ವದಲ್ಲಿ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾರ್ಗದರ್ಶನದಲ್ಲಿ ಉದ್ಯಮಿಗಳ ಸಹಕಾರದೊಂದಿಗೆ ನಡೆಯಲಿರುವ ಈ ಸಪ್ತಾಹದ ಆ.25ರ ಭಾನುವಾರ ಸಂಜೆ 6ರಿಂದ ಚಿತ್ರಸೇನಾ ಕಾಳಗ,26ರ ಸೋಮವಾರ ಸಂಜೆ 6ಕ್ಕೆ ಮೈಂದ ದ್ವಿವಿದ ಕಾಳಗ,27.ಮೀರಮಣಿ ಕಾಳಗ,28.ಚಂದ್ರಹಾ ಚರಿತ್ರೆ,29.ಶಶಿ ಪ್ರಭಾ ಪರಿಣಯ,30ಕ್ಕೆ ಸೈಂಧವ ವಧೆ,ಆ.31ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಭಾಗವಹಿಸಲಿದ್ದಾರೆ ಅಲ್ಲದೆ ಲವಕುಶ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಕರ್ಕೇರ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here