ಸಾಲಿಗ್ರಾಮ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷರಾಗಿ ಗಿರಿಜಾ ಪೂಜಾರಿ ಆಯ್ಕೆ

0
450

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯತ್ ನೂತನ ಆಡಳಿತ ಮಂಡಳಿಗೆ ಬಿಜೆಪಿಯ ಸುಕನ್ಯಾ ಶೆಟ್ಟಿ ಹಾಗೂ ಗಿರಿಜಾ ಪೂಜಾರಿ ಆಯ್ಕೆಯಾಗುವ ಮೂಲಕ ಸಾಲಿಗ್ರಾಮ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ ಜಾರಿದೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಾಲಿಗ್ರಾಮ ಪಟ್ಟ ಪಂಚಾಯತ್ ನ 10 ನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ –ಅ (ಮಹಿಳೆ) ಗೆ ಮೀಸಲಿರಿಸಲಾಗಿರಿಸಿ ಆಗಸ್ಟ್ 27ರಂದು ಚುನಾವಣೆ ನಿಗಧಿಪಡಿಸಲಾಗಿತ್ತು.

Click Here

ಅದರಂತೆ ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಚುನಾವಣೆ ನಡೆಯಿತು. ರಂದು ಬೆಳ್ಗಗೆ 9 ಗಂಟೆಯಿಂದ 11 ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ಬಳಿಕ ಮಧ್ಯಾಹ್ನ 1.10 ರಿಂದ 1.30 ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದ ಬಳಿಕ ಚುನಾವಣೆ ನಡೆಯಿತು. ಒಟ್ಟು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ 16 ಸದಸ್ಯರಿದ್ದು, ಆ ಪೈಕಿ ಬಿಜೆಪಿ 10, ಕಾಂಗ್ರೆಸ್ 5 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಶಾಸಕರಿಗೆ ಮತದಾನದ ಅವಕಾಶವಿರುವುದರಿಂದ ಇಂದು ನಡೆದ ಚುನಾವಣೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರೂ ಮತ ಚಲಾಯಿಸಿದರು. ಆದರೆ ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಮತದಾನ ನಿರಾಕರಿಸಿದರು.

ಚುನಾವಣೆಯ ಬಳಿಕ ಸುಕನ್ಯಾ ಶೆಟ್ಟಿ ಹಾಗೂ ಗಿರಿಜಾ ಪೂಜಾರಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಡಳಿತದ ಗದ್ದುಗೆಯೇರಿದರು.

Click Here

LEAVE A REPLY

Please enter your comment!
Please enter your name here