ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಈ ದಿನ ಬಸ್ರೂರಿನ ಸಂತ ಫಿಲಿಪ್ ನೆರಿ ಚರ್ಚ್ ಆವರಣದಲ್ಲಿ ಆನೇಕ ಫಲ ನೀಡುವ ಸಸಿಗಳನ್ನು ನೆಡಲಾಯಿತು ಮತ್ತು ಸುಮಾರು 200 ಫಲ ನೀಡುವ ಸಸಿಗಳನ್ನು, ಚರ್ಚ್‌ನ ವಂದನೀಯ ಗುರುಗಳಾದ ಮೇಲ್ವಿ ರೋಯ್ ಲೋಬೊ ಮತ್ತು ಹಂಗ್ಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರೋವನ್ ಡಿ ‘ ಕೋಸ್ತಾ ರವರು ಊರ ಜನರಿಗೆ ಸಸಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಪದಾಧಿಕಾರಿಗಳು, ಝೋನ್ ಚೇರ್ಮನ್ ಬಾಗವಹಿಸಿದಲ್ಲದೆ, ಅ ಚರ್ಚಿನ ವಿವಿಧ ಸಂಘ ಗಳು ಸಹಕರಿಸಿದ್ದರು.











