ಕೋಟ ಗಣೇಶೋತ್ಸವದಲ್ಲಿ ಸಂಸದರಿಗೆ ಹುಟ್ಟೂರ ಗೌರವ

0
199

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 49ನೇ ವರ್ಷದ ಗಣೇಶೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು.

ಇದೇ ವೇಳೆ ವಿಶೇಷ ಅಭಿನಂದನೆಯ ಭಾಗವಾಗಿ ಮೆಸ್ಕಾಂ ಸಿಬ್ಬಂದಿ ಉಮ್ಮರ್, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ವಿಶ್ವನಾಥ್, ಲಾಂಡ್ರಿ ಶ್ರಮಜೀವಿ ರಾಮದಾಸ್, ಯಕ್ಷಗುರು ನರಸಿಂಹ ತುಂಗ, ಉರಗ ರಕ್ಷಕ ವಿಜಯ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು.

Click Here

ಮುಖ್ಯ ಅಭ್ಯಾಗತರಾಗಿ ಕೋಟ ಆರಕ್ಷಕ ಠಾಣಾಧಿಕಾರಿ ಸುಧಾ ಪ್ರಭು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಕುಂದಾಪುರ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶೋಕ್ ಆಚಾರ್, ಉದ್ಯಮಿ ಸುರೇಶ್ ಪ್ರಭು ,ಸಮಿತಿಯ ಅಧ್ಯಕ್ಷ ರಮಾನಾಥ್ ಜೋಗಿ ಮತ್ತಿತರರು ಇದ್ದರು.

ಇದೇ ವೇಳೆ ಗಣೇಶೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿಯ ರಂಜಿತ್ ಕುಮಾರ್, ಜೀವನ್ ಕುಮಾರ್, ಅವಿನಾಶ್ ಮರಕಾಲ ಸನ್ಮಾನಪತ್ರವಾಚಿಸಿದರು. ಸಮಿತಿ ಪ್ರಮುಖರಾದ ಚಂದ್ರ ಪೂಜಾರಿ ಸ್ವಾಗತಿಸಿದರೆ. ಕಾರ್ಯಕ್ರಮವನ್ನು ಸಮಿತಿಯ ಕಾರ್ಯದರ್ಶಿ ಚಂದ್ರಯ್ಯ ಆಚಾರ್ ಪ್ರಾಸ್ತಾವನೆ ಸಲ್ಲಿಸಿ ವರದಿ ವಾಚಿಸಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here