ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.
ಉದ್ಯಮಿ ಕೋಟೇಶ್ವರ ಯುವ ಮೆರಿಡಿಯನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಉದಯಕುಮಾರ ಶೆಟ್ಟಿ
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ನೀಡಿದರೆ ಪ್ರತಿಭೆ ಬೆಳೆಯಲು ಸಹಕಾರಿ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಶಾಲಾ ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷರು ಹಾಗೂ ಸಭಾಪತಿಗಳು ರೆಡ್‌ಕ್ರಾಸ್ ಸಂಸ್ಥೆ ಕುಂದಾಪರ ಘಟಕದ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಇವರು ಮಕ್ಕಳಿಗೆ ದಾನಿಗಳು ನೀಡಿದ ಸಮವಸ್ತ್ರವನ್ನು ವಿತರಿಸಿದರು.
ಸಭಾಧ್ಯಕ್ಷರಾದ ಜಯಕರ ಶೆಟ್ಟಿ ಇವರು ದಾನಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀ, ವಿನಯ ಕುಮಾರ ಶೆಟ್ಟಿ ಯುವ ಮೆರಿಡಿಯನ್ ಕೋಟೇಶ್ವರ, ನಿವೃತ್ತ ಬ್ಯಾಂಕ್ ಮ್ಯಾನೆಜರ್ ಶಿವರಾಮ ಶೆಟ್ಟಿ, ಶಾಲಾ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಆಶಾಲತಾ ಶಿವರಾಮ ಶೆಟ್ಟಿ, ರಚನಾ ಕ್ರೋಡಡಬೈಲೂರಿನ ಅಧ್ಯಕ್ಷರಾದ ಸತೀಶ್ ಬೈಲೂರು, ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಅನುಷಾ ಶೆಟ್ಟಿ. ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ರಾಮ ಮೋಗವೀರ, ಉಪಾಧ್ಯಕ್ಷರಾದ ವನಜ ಮುಖ್ಯಶಿಕ್ಷಕರು ಕುಳ್ಳುಂಜೆ, ಕುಂದಾಪುರ ವಲಯ ಪದವೀಧರ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವರಾಮ, ಬಿ ಆರ್ ಪಿ ಮಿಲ್ಟನ್, ಬಿ ಐ ಇ ಆರ್ ಟಿ ಪ್ರದೀಪ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಅಂಪಾರು ಶಿಕ್ಷಣ ಸಂಯೋಜಕ ವೃತ್ತ ಶಿಕ್ಷಣ ಸಂಯೋಜಕರಾದ ಶಂಕರ ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ಸ್ವಾಗತಿಸಿದರು. ಬಳ್ಕೂರು ಶಾಲೆಯ ಸಹ ಶಿಕ್ಷಕ ಸಂತೋಷ ಮತ್ತು ಸ್ಥಳೀಯ ಶಾಲೆಯ ಸಹ ಶಿಕ್ಷಕಿ ಸಂಧ್ಯಾ ಕೆ. ಕಾರ್ಯಕ್ರಮ ನಿರೂಪಿಸಿದರು. ಶಂಕರನಾರಾಯಣ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕರ ದೇವಾಡಿಗ ಅವರು ವಂದಿಸಿದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ಉಮೇಶ ಶೆಟ್ಟಿ ಕಲ್ಲುಗದ್ದೆ, ಸ್ಥಳೀಯ ಶಾಲೆಯ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಅನುಷಾ ಶೆಟ್ಟಿ, ಎಸ್ ಡಿ ಎಮ್ ಸಿ ಸದಸ್ಯರು, ವಿವಿಧ ಶಾಲೆಯಿಂದ ಕೊಠಡಿ ಮೇಲ್ವಿಚಾರಕರು ಮತ್ತು ತೀರ್ಪುಗಾರರಾಗಿ ಆಗಮಿಸಿದ ಶಾಲಾ ಶಿಕ್ಷಕರು. ಇಲಾಖೆಯ ಅಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಸದಸ್ಯರು, ಶಾಲೆಯ ಅಡುಗೆಯವರು ಮತ್ತು ಸ್ಥಳೀಯ ಶಾಲೆಯ ಶಿಕ್ಷಕರು ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದದರು. ಸಹ ಶಿಕ್ಷಕ ಆನಂದ ಕುಲಾಲ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು.











