ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಮಣೂರು ಮಹಾಲಿಂಗೇಶ್ವರ ಹಾಗೂ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ನೂತನ ವ್ಯವಸ್ಥಾಪನಾ ಸಮಿತಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಸತೀಶ್ ಹೆಚ್ ಕುಂದರ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಭಾನುವಾರ ಶ್ರೀ ದೇವಳದಲ್ಲಿ ನಡೆದ ಪ್ರಥಮ ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಗೊಳಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ವ್ಯವಸ್ಥಾಪನ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಸದಸ್ಯರಾಗಿ ಅವಿರೋಧವಾಗಿ ಅಶೋಕ್ ಶೆಟ್ಟಿ, ರವಿ ಐತಾಳ್,ಅಚ್ಯುತ ಹಂದೆ,ಕೃಷ್ಣ ದೇವಾಡಿಗ, ಜಿ. ಬಾಬು,ದಿನೇಶ ಆಚಾರ್ಯ,ಸುಫಲ ಸಿ.ಶೆಟ್ಟಿ, ಎಂ. ದಿವ್ಯ ಪ್ರಭು ಆಯ್ಕೆಗೊಳಿಸಿ ಹಿಂದೂ ಧರ್ಮದಾಯದತ್ತಿ ಇಲಾಖೆ ಆದೇಶ ಹೊರಡಿಸಿದೆ.











