ಕುಂದಾಪುರ ಮಿರರ್ ಸುದ್ದಿ…
ಕೋಟ: ನವಂಬರ್ 13ರಂದು ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ವತಿಯಿಂದ ಕಾರ್ತಟ್ಟುಗೆ ಹೋಗುವ ಎರಡನೇ ಅಡ್ಡರಸ್ತೆ ಗೆ ಇತ್ತೀಚೆಗೆ ನಮ್ಮನ್ನಗಲಿದ ಕರುನಾಡ ಮಾಣಿಕ್ಯ ನಟಸಾರ್ವಭೌಮ ಪುನೀತ್ ರಾಜಕುಮಾರ್ ಇವರ ಸವಿನೆನಪಿಗಾಗಿ, ಪುನೀತ್ ರಾಜಕುಮಾರ್ ರಸ್ತೆ ಎನ್ನುವ ನಾಮಫಲಕ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾದ ಡಾ.ಮೋಹನ್ ರೆಡ್ಡಿ, ಜಯ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ವಕೀಲ ಶ್ಯಾಮಸುಂದರ ನಾಯರಿ ಉದ್ಯಮಿಗಳಾದ ನಿತ್ಯಾನಂದ ನಾಯರಿ, ಕೆಎಲ್‍ಪಿ ಲಕ್ಷ್ಮಣ್ ಪೂಜಾರಿ, ಕಲಾರಂಗದ ಅಧ್ಯಕ್ಷ ಲಕ್ಷ್ಮಣ ನಾಯರಿ, ಮಾಜಿ ಅಧ್ಯಕ್ಷ ಪ್ರಭಾಕರ್ ನಾಯರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.











