ಕುಂದಾಪುರ :ಹ್ಯೂಮನ್ ರೈಟ್ಸ್ ಮತ್ತು ವುಮೆನ್ ಚೈಲ್ಡ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಲೈನ್ ಮ್ಯಾನ್ಗಳಿಗೆ ಸನ್ಮಾನ

0
223

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಪ್ರಸ್ತುತ ಸನ್ನಿವೇಶದಲ್ಲಿ ಇಂದು ವಿದ್ಯುತ್ ಜನರಿಗೆ ಎಷ್ಟು ಅವಲಂಬಿತವಾಗಿದೆಯೋ ಅದೇ ರೀತಿ ಅದರಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಅಷ್ಟೇ ಅಪಾಯವಿದೆ. ನಾವು ಲೈನ್ ಮ್ಯಾನ್ಗಳಿಗೆ ಯೋಧರಂತೆ ನೋಡಬೇಕು. ಅವರ ಕಷ್ಟ ಸುಖದಲ್ಲಿ ನಾವು ಕೂಡ ಭಾಗಿಯಾಗಬೇಕು. ಹಾಗಿದ್ದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಮಳೆಗಾಲದಲ್ಲಿ, ಬೇಸಿಗೆಕಾಲದಲ್ಲಿ ಅವರ ಕಷ್ಟ ಹೇಳುತ್ತೀರದು. ಆದರೂ ಎಡಬಿಡದೆ ಸಾರ್ವಜನಿಕರ ಸೇವೆಯಲ್ಲಿ ಸದಾ ತಲ್ಲಿನರಾಗುತ್ತಾರೆ. ಅದೆಷ್ಟೋ ಜನ ಕೈಕಾಲು ಕಳೆದುಕೊಂಡು ಜನರ ಸೇವೆಯನ್ನೇ ನಮ್ಮ ಸೇವೆ ಎಂದು ನಂಬಿ ಇಂದು ಕೂಡ ಅದೇ ಉದ್ಯೋಗದಲ್ಲಿದ್ದಾರೆ. ಹಾಗಾಗಿ ಅವರನ್ನು ಗುರುತಿಸಿ ಕರ್ನಾಟಕ ಹ್ಯೂಮನ್ ರೈಟ್ಸ್ ಹಾಗೂ ವುಮೆನ್ ಚೈಲ್ಡ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಇಂದು ನಾವು ಅವರನ್ನು ಗುರುತಿಸಿ ಸನ್ಮಾನಿಸುತಿದ್ದೇವೆ ಎಂದು ಹ್ಯೂಮನ್ ರೈಟ್ಸ್ ರಾಜ್ಯ ಅಧ್ಯಕ್ಷರಾದ ಡಾ. ನಿರಂಜನ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಭಾಗದ ವಿದ್ಯುತ್ ಲೈನ್ ಮ್ಯಾನ್ಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಹ್ಯೂಮನ್ ರೈಟ್ಸ್ ರಾಜ್ಯ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಆಶಾ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಸುಂದರ ಶೆಟ್ಟಿ ಸುನಿಲ್, ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹ್ಯೂಮನ್ ರೈಟ್ಸ್ ನ್ಯಾಷನಲ್ ಸಂಸ್ಥೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ. ನಿರಂಜನ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

Click Here

LEAVE A REPLY

Please enter your comment!
Please enter your name here