ಕುಂದಾಪುರ :ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಗಂಗೊಳ್ಳಿಯ ಯುವಕ ನಿಧನ

0
294

ಕುಂದಾಪುರ ಮಿರರ್ ಸುದ್ದಿ…

ಗಂಗೊಳ್ಳಿ: ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬುವವರ ಪುತ್ರ ಮುಬಾಶೀರ್ ಬಷೀರ್(30) ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಇದನ್ನು ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಗಂಗೊಳ್ಳಿಯಲ್ಲಿ ಇರುವ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.

2 ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ಮುಬಾಶೀರ್ ಬಷೀರ್ ಅವರು ವಿವಾಹವಾಗಿದ್ದರು. ಸೌದಿಯಲ್ಲಿ ಉದ್ಯೋಗದಲ್ಲಿದ್ದ ಅವರು, ಪತ್ನಿಯೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ ಎಂಎಂ ಶಾಲೆ, ಪ್ರೌಢ ಶಿಕ್ಷಣವನ್ನು ವಿಕೆಆರ್ ಆಂಗ್ಲ ಮಾಧ್ಯಮ ಶಾಲೆ, ಪಿಯು ಶಿಕ್ಷಣವನ್ನು ಭಂಡಾರ್ ಕರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈಯ ಕಾಲೇಜಿನಲ್ಲಿ ಮಾಡಿದ್ದರು.

Click Here

ಮುಬಾಶೀರ್ ಬಷೀರ್ ಅವರು ಊರಿನಲ್ಲಿದ್ದಾಗ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು. 4 ವರುಷಗಳ ಹಿಂದೆ ತ್ರಾಸಿ ಮರವಂತೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಉಪ್ಪಿನಂಗಡಿ ಮೂಲದ ಬಾಲಕನ ಅಂತ್ಯಸಂಸ್ಕಾರದ ಕಾರ್ಯವನ್ನು, ವಿಧಿವಿಧಾನಗಳನ್ನು ಗಂಗೊಳ್ಳಿಯ ತನ್ನ ಮನೆಯಲ್ಲಿಯೇ ನೆರವೇರಿಸಲು ಅವಕಾಶ ಮಾಡಿ ಕೊಟ್ಟಿದ್ದರು. ಗಾಯಾಳುಯೋರ್ವರ ಆಸ್ಪತ್ರೆ ವೆಚ್ಚವನ್ನು ತಾನೇ ಭರಿಸಿದ್ದರು. ಕಷ್ಟದಲ್ಲಿದ್ದಾಗ ಸಹಾಯ ಮಾಡುವುದಲ್ಲದೇ, ತುರ್ತು ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಡುತ್ತಿದ್ದರು. ಇನ್ನು ಮುಬಾಶೀರ್ ಬಷೀರ್ ಅವರು ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಸೌದಿ ತೆರಳಿದ್ದರು.

ಮೃತರು ಪತ್ನಿ, ತಾಯಿ, ತಂದೆ, ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದು, ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ.

ಮಬಾಶೀರ್ ಮೃತ ಸುದ್ದಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯಲ್ಲಿರುವ ಅವರ ಮನೆಗೆ ಕುಟುಂಬಸ್ಥರು, ಮಿತ್ರರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಂಬನಿ ಮಿಡಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here