ಸೆ. 29 ರಂದು ಬ್ರಹ್ಮಾವರದಲ್ಲಿ ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗೆ ಎಂಬ ಅಭಿಯಾನಕ್ಕೆ ಚಾಲನೆ

0
213

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗೆ ಎಂಬ ಅಭಿಯಾನವನ್ನು ಸೆ. 29 ರಂದು ಭಾನುವಾರ ಬೆಳಿಗ್ಗೆ 9:30ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದ ಹತ್ತಿರ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರ ಕಚೇರಿಯ ಬಳಿ ಚಾಲನೆ ನೀಡಲಿದ್ದಾರೆ.

ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗೆ ಎಂಬ ಅಭಿಯಾನದ ಮೂಲಕ ಗೋಸೇವೆಗೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಮುಖಾಂತರ ಗೋ ಶಾಲೆಗಳಿಗೆ ಗೋವಿಗೆ ಆಹಾರ ನೀಡಲು ನಿರ್ಧರಿಸಿದ್ದು ಸೆ. 29 ರಂದು ಭಾನುವಾರ ಬ್ರಹ್ಮಾವರದಲ್ಲಿ ಬೃಹತ್ ಮಟ್ಟದ ಅಭಿಯಾನ ನಡೆಯಲಿದೆ.

Click Here

ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಅಶೋಕ್ ಕುಮಾರ್ ಕೊಡವೂರು, ಕೃಷ್ಣಮೂರ್ತಿ ಆಚಾರ್ಯ ಉಡುಪಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ವಕೀಲರಾದ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ್ ಶೆಟ್ಟಿ , ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಇಚ್ಚಿತ್ ಶೆಟ್ಟಿ, ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗೆ, ಅಭಿಯಾನದ ಜಿಲ್ಲಾ ಸಂಚಾಲಕ ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.

 

Click Here

LEAVE A REPLY

Please enter your comment!
Please enter your name here