ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಲಕ್ಷ್ಮೀನಾರಾಯಣ ಅವರು ನಿಧನರಾದ ವಿಷಯ ತಿಳಿದು ತೀವು ದು:ಖವಾಯಿತು.
ಕೆ.ಲಕ್ಷ್ಮೀನಾರಾಯಣ ನಿಧನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಜನತೆಗೆ ತುಂಬಲಾರದ ನಷ್ಟವುಂಟಾಗಿದೆ. ಕ್ಷೇತ್ರದಲ್ಲಿ ಇವರ ನಿಧನದಿಂದ ದು:ಖವು ಮಡುಗಟ್ಟಿದೆ. ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸ್ಥಾಪಕಾಧ್ಯಕ್ಷರಾಗಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಗೌರವಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಕೆ.ಲಕ್ಷ್ಮೀನಾರಾಯಣ ನಿಧನದಿಂದ ಇಡೀ ನಾಡಿಗೆ ತುಂಬಲಾರದಷ್ಟು ನಷ್ಟವುಂಟಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.











