ಪುಟ್ಬಾಲ್ ಪಂದ್ಯಾಟ :ಎಕ್ಸಲೆಂಟ್ ಕಾಲೇಜಿನ ಪ್ರಥಮ್ ಎಸ್. ಶೆಟ್ಟಿ ಮತ್ತು ಎಲಿಕ್ ಅಬ್ರಾನ್ ಡಿ’ಆಲ್ಮೇಡಾ ರಾಜ್ಯಮಟ್ಟಕ್ಕೆ ಆಯ್ಕೆ

0
427

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಎಕ್ಸಲೆಂಟ್ ವಿದ್ಯಾಸಂಸ್ಥೆಯು ಕೇವಲ ಶಿಕ್ಷಣಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದದ್ದಲ್ಲದೆ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕ್ಷೇತ್ರದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ತನ್ನ ಹಿರಿಮೆಯ ಛಾಪನ್ನು ಮೂಡಿಸಿ ಅದೆಷ್ಟೊ ಪ್ರಶಸ್ತಿಗಳನ್ನು ತನ್ನ ಮೂಡಿಗೇರಿಸಿಕೊಂಡಿದೆ. ಅಂತಹ ಸಾಧನೆಗಳ ಹಾದಿಯ ದಾಖಲೆಗಳ ಸರಮಾಲೆಗಳ ಗರಿಯತ್ತ ಸಾಗುತ್ತಾ, ಅ.1ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಡಾ. ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು, ನಿಟ್ಟೆ, ಕಾರ್ಕಳ ಇವರ ಸಹಭಾಗಿತ್ವದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಕುಂದಾಪುರ ವಲಯವು ಉಡುಪಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಮುಂದೆ ನಡೆಯುವ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ.

Click Here

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪುಟ್ಬಾಲ್ ಪ್ರತಿಭೆಗಳಾದ ಪ್ರಥಮ್ ಎಸ್ ಶೆಟ್ಟಿ ಮತ್ತು ಎಲಿಕ್ ಅಬ್ರಾನ್ ಡಿ’ಆಲ್ಮೇಡಾ ರವರು ಜಿಲ್ಲಾತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ. ಸಂಸ್ಥೆಯ ಹೆಮ್ಮೆಯ ಪುಟ್ಬಾಲ್ ಆಟಗಾರರಾದ ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುವುದರ ಜೊತೆಗೆ ರಾಜ್ಯಮಟ್ಟದಲ್ಲಿಯೂ ಸಾಧನೆಯನ್ನು ಮಾಡಿ ಆಯ್ಕೆಗೊಳ್ಳುವಂತೆ ಶುಭ ಹಾರೈಸಿದ್ದಾರೆ.

Click Here

LEAVE A REPLY

Please enter your comment!
Please enter your name here