ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಪ್ರಸಿದ್ಧ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ 2024 -25 ರಿಂದ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪಾಂಡೇಶ್ವರ ಚಂದ್ರಶೇಖರ ಹೊಳ್ಳ (ಪಿ. ಸಿ. ಹೊಳ್ಳ )ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಹೆರ್ಳೆ, ಕಾರ್ಯದರ್ಶಿಯಾಗಿ ಮಹಾಬಲ ಹೇರಳೆ, ಜೊತೆ ಕಾರ್ಯದರ್ಶಿಯಾಗಿ ಚಿದಾನಂದ ತುಂಗ ಮತ್ತು ಪನ್ನಗ ನಾವಡ, ಕೋಶಾಧಿಕಾರಿಯಾಗಿ ನಾಗರಾಜ ಉಪಾಧ್ಯ, ಬಿಲಿಯನ್ ಫೌಂಡೇಶನ್ ಪ್ರತಿನಿಧಿಯಾಗಿ ಸುಬ್ರಹ್ಮಣ್ಯ ಹೇರ್ಳೆ, ಕೂಟ ಬಂದು ಪತ್ರಿಕೆ ಪ್ರತಿನಿಧಿಯಾಗಿ ಅಮರ ಹಂದೆ ಆಯ್ಕೆ ಆಗಿರುತ್ತಾರೆ.











