ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಶ್ರೀಮಾತಾ ಆಸ್ಪತ್ರೆ ಕುಂದಾಪುರ ಇಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಜರುಗಿತು.
ಖ್ಯಾತ ಹೃದಯ ರೋಗ ತಜ್ಞೆ ಪುಶ್ವಿಧರ್ ಧನುಪುತ್ ರೋಗಿಗಳ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಿ ಹೃದಯದ ಬಗ್ಗೆ ಕಾಳಜಿ ಅತಿ ಮುಖ್ಯ. ದೈನಂದಿನ ಜೀವನದಲ್ಲಿ ಒತ್ತಡದ ಬದುಕನ್ನು ಹತೋಟಿಯಲ್ಲಿ ತರಲು ಸರಳವಾದ ನಡಿಗೆ ವ್ಯಾಯಾಮಗಳ ಮೂಲಕ ಮನಸ್ಸನ್ನು ಸಂತೋಷವಾಗಿ ಇಡುವುದರ ಮೂಲಕ ಹೃದಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು. ದುಶ್ಚಟಗಳಿಂದ ದೂರ ಇದ್ದಷ್ಟು ನಮ್ಮ ಆರೋಗ್ಯ ಸದಾ ನಮ್ಮೊಂದಿಗೆ ಆರೋಗ್ಯವಾಗಿರುತ್ತದೆ ಎಂದರು.
ಶ್ರೀಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಕಾಶ್ ಸಿ ತೋಳಾರ್ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸವಿತಾ ಪಿ ತೋಳಾರ್, ನೇಹಾ ಸತೀಶ್, ಗೀತಾ ಆರ್ ರಾವ್, ಉಪಸ್ಥಿತರಿದ್ದರು.











