ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜೆಸಿಐ ಕುಂದಾಪುರ ಸಿಟಿ 2025ರ ಸಾಲಿನ ನೂತನ ಅಧ್ಯಕ್ಷ ರಾಗಿ ತೆಕ್ಕಟ್ಟೆಯ ಯೂಸುಫ್ ಸಲೀಮ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜೆಸಿಐ ಕುಂದಾಪುರ ಸಿಟಿ ನಿಕಟ ಪೂರ್ವಾಧ್ಯಕ್ಷರಾದ ಡಾ. ಸೋನಿ ಡಿ’ ಕೋಸ್ಟರವರು ಅಧ್ಯಕ್ಷರ ಘೋಷಣೆ ಮಾಡಿದರು. ತೆಕ್ಕಟ್ಟೆಯ ಫಾಲ್ಕೋನ್ ಸಂಸ್ಥೆಯಾ ಸದಸ್ಯರಾದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು.
ಜೆಸಿಐ ಕುಂದಾಪುರ ಸಿಟಿಯಾ ಲೇಡಿ ಜೇಸಿ ಸಂಯೋಜಕರಾಗಿ ಶೈಲ ಲೂಯ್ಸ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ನಾಗೇಶ್ ನಾವಡ, ಚಂದ್ರಕಾಂತ್, ವಿಜಯ ಬಂಡಾರಿ, ಜೇಸಿರೇಟ್ ಶೈಲಾ ಇನ್ನಿತರರು ಉಪಸ್ಥಿತರಿದ್ದರು.











