ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ನ ನಾರಾಯಣ ವಿಶೇಷ ಮಕ್ಕಳ ಶಾಲೆ ಆಶ್ರಯದಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರೋವನ್ ಡಿ’ ಕೋಸ್ತ್ ಅವರ ಅಧ್ಯಕ್ಷತೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಟ್ರಸ್ಟೀ ಸುರೇಶ ಪ್ರಾಸ್ತಾವಿಕ ನುಡಿಯಲ್ಲಿ ಶಾಲೆ ನಡೆದು ಬಂದ ರೀತಿ ತಿಳಿಸಿದರು. ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು. ಲಯನ್ ರೋವನ್ ಡಿ’ ಕೋಸ್ತ್ ಅವರು ಮಕ್ಕಳ ಚಟುವಟಿಕೆ ಪ್ರಶಂಸಿಸಿ ಶಾಲೆಗೆ ಒಂದು ತಿಂಗಳ ಆಹಾರ ಸಾಮಾಗ್ರಿ ಒದಗಿಸುವುದಾಗಿ ವಾಗ್ದಾನ ಮಾಡಿದರು. ವೇದಿಕೆಯಲ್ಲಿ ಲಯನ್ ಸಂದೀಪ್ ಶೆಟ್ಟಿ, ಲಯನ್ ರಮೇಶ್ ಶೆಟ್ಟಿ,ಲಯನ್ ಪುನೀತ್ ಶೆಟ್ಟಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸಭೆಯಲ್ಲಿ ಲಯನ್ಸ್ ಸದಸ್ಯರಲ್ಲದೆ ಪೋಷಕರು ಉಪಸ್ಥಿತರಿದ್ದರು.











