ಕುಂದಾಪುರದಿಂದ ತಿರುಪತಿಗೆ ರೈಲು: ಕುಂದಾಪುರದಲ್ಲಿ ಅದ್ದೂರಿ ಸ್ವಾಗತ

0
406

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಮಂಗಳೂರುವರೆಗೆ ಮಾತ್ರವಿದ್ದ ತಿರುಪತಿ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದ್ದು, ಮೊದಲ ಓಡಾಟವು ವಿಜಯ ದಶಮಿ ದಿನವಾರ ಶನಿವಾರ ಆರಂಭಗೊಂಡಿತು. ಕರಾವಳಿಯ ಮೂರು ಜಿಲ್ಲೆಗಳ ಅಸಂಖ್ಯ ಭಕ್ತರ ಬೇಡಿಕೆಯಾಗಿದ್ದ ಈ ತಿರುಪತಿ ರೈಲು ಮೊದಲ ಬಾರಿಗೆ ಕುಂದಾಪುರಕ್ಕೆ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

Click Here

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದೆ. ಇದು ಸಂಸದರು, ಸಚಿವರ ಪ್ರಯತ್ನ ಹಾಗೂ ರೈಲು ಪ್ರಯಾಣಿಕರ ಸಮಿತಿಯ ಹೋರಾಟದಿಂದ ಸಫಲವಾಗಿದೆ. ಇದರ ಪ್ರಯೋಜನವನ್ನು ಹೆಚ್ಚಿನ ಜನರು ಪಡೆಯುವಂತಾಗಲಿ ಎಂದು ಹಾರೈಸಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಸ್ವಾಗತ ಕೋರಿ, ಮಾತನಾಡಿ, ಬಹುದಿನಗಳ ಬೇಡಿಕೆ ಈ ದಿನ ಈಡೇರಿದೆ. ಈ ಭಾಗದಿಂದ ಬಹಳಷ್ಟು ಭಕ್ತರು ತಿರುಪತಿಗೆ ಹೋಗುತ್ತಾರೆ. ಈ ರೈಲು ಸಂಚಾರದಿಂದ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಕೊಂಕಣ್ ರೈಲ್ವೆ ಆರಂಭಿಸಿದ ಜಾರ್ಜ್ ಫೆರ್ನಾಂಡಿಸ್ ಅವರನ್ನು ನಾವೆಲ್ಲ ಸ್ಮರಿಸಬೇಕು. ತಿರುಪತಿಗೆ ನೇರ ರೈಲು ಆರಂಭಿಸಲು ಶ್ರಮಿಸಿದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಬೇಕು ಎಂದರು.

ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇಗುಲದ ಮ್ಯಾನೇಜಿಂಗ್ ಟ್ರಸ್ಟಿ ರಾಧಾಕೃಷ್ಣ ಶೆಣೈ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸುರೇಶ್ ಬೆಟ್ಟಿನ್, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪದ್ಮನಾಭ ಶೆಣೈ, ಸಂಚಾಲಕ ವಿವೇಕ್ ನಾಯಕ್, ಸದಸ್ಯರಾದ ಪ್ರವೀಣ್ ಕುಮಾರ್, ಗೌತಮ್ ಶೆಟ್ಟಿ, ಜಾಯ್ ಕರ್ವಾಲೋ, ಸುಧಾಕರ ಶೆಟ್ಟಿ ಹುಂತ್ರಿಕೆ, ನಾಗರಾಜ ಆಚಾರ್, ರಾಜು ಮೊಗವೀರ, ರಾಘವೇಂದ್ರ ಶೇಟ್, ಉದಯ ಭಂಡಾರ್‌ರ್ಕರ್, ಧರ್ಮಪ್ರಕಾಶ್, ರೋಟರಿ ಕ್ಲಬ್‌ನ ಕೆ.ಕೆ. ಕಾಂಚನ್, ಗಣಪತಿ ಟಿ. ಶ್ರೀಯಾನ್, ರೆಡ್‌ಕ್ರಾಸ್‌ನ ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್‌ನ ಏಕನಾಥ ಬೋಳಾರ್, ಕ್ಲೀನ್ ಕುಂದಾಪುರದ ಕಲ್ಪನಾ ಭಾಸ್ಕರ್, ಸರಸ್ವತಿ ಪುತ್ರನ್, ಭಾಸ್ಕರ ಪೂಜಾರಿ, ಬಿಜೆಪಿ ಪ್ರಮುಖರಾದ ಪೃಥ್ವಿರಾಜ್ ಬಿಲ್ಲಾಡಿ, ಸೌರಭಿ ಪೈ ಮತ್ತಿತರರಿದ್ದರು.

Click Here

LEAVE A REPLY

Please enter your comment!
Please enter your name here