ಕುಂದಾಪುರ: ಸಮುದ್ಯತಾ ಸಂಸ್ಥೆಯ ಆಹಾರ ಆಪ್ ಲೋಕಾರ್ಪಣೆ

0
326

Click Here

Click Here

 

ಕುಂದಾಪುರ ಮಿರರ್ ‌ಸುದ್ದಿ…

ಕುಂದಾಪುರ: ಸಮುದ್ಯತಾ ಗ್ರೂಪ್ ಸಂಸ್ಥೆಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. ಕುಂದಾಪುರದ ಪುರಸಭಾ ವ್ಯಾಪ್ತಿಯಿಂದ 14 ಕಿ.ಮೀ ವಿಸ್ತೀರ್ಣದಲ್ಲಿ ಆನ್ ಲೈನ್ ಆಹಾರ ವಿತರಣೆ ಮಾಡುವ ಸಮುದ್ಯತಾ ಆಪ್ ನ್ನು ಶನಿವಾರ ಲೋಕಾರ್ಪಣೆಗೊಳಿಸಿತು.

Click Here

ಆಪ್ ಬಿಡುಗಡೆ ಕಾರ್ಯಕ್ರಮವನ್ನು ಕೋಟದ ಜನತಾ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎ ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ತಂಡ, ಗುಣಮಟ್ಟದ ಆಹಾರ, ಸಮಯ ಪಾಲನೆಯಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.

ಇದೇ ಸಂದರ್ಭ ಸಂಸ್ಥೆಯ ಸುಮಾರು ನೂರಕ್ಕೂ ಮಿಕ್ಕಿ ಸಿಬ್ಬಂದಿಗಳಿಗೆ ಇಎಸ್ಐ ಮತ್ತು ಪಿ ಎಫ್ ಸೌಲಭ್ಯಗಳನ್ನು ವಿತರಿಸಿದ ಚಾರ್ಟೆಡ್ ಅಕೌಂಟೆಂಟ್ ಕೆ. ಪದ್ಮನಾಭ ಕಾಂಚನ್ ಮಾತನಾಡಿ, ಸಮುದ್ಯತಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಆಡಳಿತ ವರ್ಗ ಅತ್ಯುತ್ತಮ ಸೇವಾ ಮನೋಭಾವ ಹೊಂದಿದ್ದು, ಒಂದೇ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗ್ರಾಹಕರನ್ನು ತಲುಪಲು ಯಶಸ್ಸು ಸಾಧಿಸಿರುವುದು ಶ್ಲಾಘನೀಯ ಎಂದರು.

ಖಾಸಗೀ ಆಪ್ ಗಳಿಂದ ಹೋಟೇಲ್ ಉದ್ಯಮ ಬಸವಳಿದು ಹೋಗಿದ್ದು, ಗ್ರಾಹಕರಿಗೆ ಹೊರೆಯಲ್ಲದ ಸ್ವಂತ ಆಪ್ ಬಳಸುವುದು ಉದ್ಯಮಶೀಲತೆಯ ಆದ್ಯತೆಯಾಗಬೇಕು ಎಂದು ಖ್ಯಾತ ಉದ್ಯಮಿ ಹಾಗೂ ಟಿವಿ ನಿರೂಪಕ ರಾಘವೇಂದ್ರ ಕಾಂಚನ್ ಹೇಳಿದರು.

ಆಪ್ ಬಿಡುಗಡೆಯ ತಕ್ಷಣ ಉದ್ಯಮಿ ಪ್ರಶಾಂತ್ ಎ ಕುಂದರ್ ಅವರು ಸ್ಥಳದಲ್ಲಿಯೇ ಆನ್ ಲೈನ್ ಮೂಲಕ ಪಾನೀಯ ಆರ್ಡರ್ ಮಾಡಿಸಿಕೊಂಡು ಅತಿಥಿಗಳಿಗೆ ಕೊಟ್ಟು ಸರ್ ಪ್ರೈಸ್ ನೀಡಿದರು.

ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಕಾಂಚನ್ ಉಪಸ್ಥಿತರಿದ್ದರು. ಸಂಸ್ಥೆಯ ಸಂದೀಪ್ ಆಪ್‌ ಬಗ್ಗೆ ವಿವರಿಸಿ, ಸಂದೇಶ್ ಶೆಟ್ಟಿ ಸಳ್ವಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here