ಕುಂದಾಪುರ :ಲಯನ್ಸ್ ಕ್ಲಬ್ ಹಂಗಳೂರಿಗೆ ಲಯನ್ಸ್ ಜಿಲ್ಲಾ 317C ಯ ಉಪ ಜಿಲ್ಲಾ ರಾಜ್ಯಪಾಲರ ಭೇಟಿ, ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗಿ

0
66

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಲಯನ್ಸ್ ಕ್ಲಬ್ ಹಂಗಳೂರು ತನ್ನ ಅವಿರತ ಸೇವಾ ಕಾರ್ಯಗಳಿಂದ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲೆ 317Cಯ ಉಪ ರಾಜ್ಯಪಾಲರಾದ ಲಯನ್ ಸಪ್ನಾ ಸುರೇಶ್ ಹೇಳಿದರು.

ಅವರು ಸಹನಾ ಕನ್ವೆನ್ಶನ್ ನ ಪೂಲ್ ಸೈಡ್ ನಲ್ಲಿ ನಡೆದ ದೀಪಾವಳಿ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಲಯನ್ ಅರುಣ್ ಕುಮಾರ್ ಹೆಗ್ಡೆ ಮಾತನಾಡಿ ಕ್ಲಬ್ ನ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Click Here

ಲಯನ್ ರೋವನ್ ಡಿ’ಕೋಸ್ತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸೇವಾ ಚಟುವಟಿಕೆಯಾಗಿ ಹಳುವಳ್ಳಿಯ ರೋಜಾರಿಯೋ ಡಿಸೋಜಾ ಎಂಬವರಿಗೆ ಅವರ ಮನೆಗೆ ಹೋಗಿ ಉಪ ಜಿಲ್ಲಾ ರಾಜ್ಯಪಾಲರ ಸಮಕ್ಸಮ ಸುಮಾರು 30 ಸಾವಿರ ರೂಪಾಯಿ ವೆಚ್ಚದ ಕ್ರತಕ ಕಾಲನ್ನು ನೀಡಲಾಯಿತು.

ಕಾರ್ಯದರ್ಶಿ ಲಯನ್ ಮ್ಯಾಥ್ಯೂ ಜೋಸೆಫ್ ಕ್ಲಬ್ ನ ಚಟುವಟಿಕೆಗಳ ವರದಿ ವಾಚಿಸಿದರು. ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಲಯನ್ ರಜತಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಚಟುವಟಿಕೆಗಳನ್ನು ಕ್ಲಬ್ ಸದಸ್ಯರ ಮಕ್ಕಳು ಮತ್ತು ಇ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಲಯನ್ ಪುನೀತ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಲಯನ್ ಗ್ರೇಟ್ಟ ಡಿ’ಕೊಸ್ತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here