ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅಂತರಾಳ ಫೌಂಡೇಶನ್(ರಿ) ಕುಂದಾಪುರ. ಶ್ರೀರಾಮ ಭಜನಾ ಮಂಡಳಿ ಬೀಜಾಡಿ ಮತ್ತು ಗೋಪಾಡಿ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಶಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ(ರಿ) ಮತ್ತು ಇಂಡಿಯನ್ ಕ್ಯಾನ್ಸರ ಸೊಸೈಟಿ ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ್ ಇವರಿಂದ ಉಚಿತ ಹೃದಯ ಸಂಬಧಿತ ಕಾಯಿಲೆಗಳು, ಬಿಪಿ, ಶುಗರ್ ಹಾಗೂ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಗಳ ಬ್ರಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ವನ್ನು ದಿನಾಂಕ 17.11.2024 ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1 ರ ವರೆಗೆ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಪಡು.ಇಲ್ಲಿ ಆಯೋಜಿಸಲಾಗಿದೆ.
ಕುಂದಾಪುರದ ಜನಪ್ರಿಯ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಿಬಿರವನ್ನು ಉದ್ಘಾಟನೆಗೊಳಿಸಲಿದ್ದಾರೆ.
ಇದರ ಪ್ರಯೋಜನವನ್ನು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರು ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.