ಕುಂದಾಪುರ ಮಿರರ್ ಸುದ್ದಿ…
ಕೋಟ: ನಾವುಂದ ಪರಿಸರದ ಕಾನ್ಸರ್ ಪೀಡಿತ 6ವರ್ಷದ ವಂಶಿತ್ ಪುಟ್ಟ ಬಾಲಕನ ನೇರವಿಗೆ ಕೋಟದ ಜೀವನ್ ಮಿತ್ರ ಬಳಗ ಕುಂದಾಪುರದ ಕುಂದೇಶ್ವರ ಜೀವನ್‍ಮಿತ್ರ ತಂಡದಿಂದ ಕ್ಯಾನ್ಸರ್ ಪೀಡಿತ ವಂಶಿತ್‍ಗೆ ದೀಪೋತ್ಸವದಲ್ಲಿ ನೇರವು ಯಾಚಿಸಿ ಅದರಿಂದ ಕ್ರೂಡಿಕರಿಸಿದ 67,762ರೂ ಗಳನ್ನು ಆ ಪುಟ್ಟ ಬಾಲಕನ ಕುಟುಂಬಕ್ಕೆ ಶನಿವಾರ ಹಸ್ತಾಂತರಿಸಿತು.
ಕೋಟದ ಅಮೃತೇಶ್ವರಿ ದೇವಳದಲ್ಲಿ ಅರ್ಚಕರ ಸಮ್ಮುಖದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗರ ಮೂಲಕ ವಂಶಿತ್ ಕುಟುಂಬಕ್ಕೆ ಹಸ್ತಾಂತರಿಸಿತು.
ದೀಪೋತ್ಸವ ರಾತ್ರಿ ಇಡೀ ನೆರವು ಯಾಚನೆ
ಶನಿವಾರ ಕುಂದಾಪುರದ ಕುಂದೇಶ್ಚರ ದೇವರ ದೀಪೋತ್ಸವದ ಅಂಗವಾಗಿ ಸಾಕಷ್ಟು ಭಕ್ತಾಧಿಗಳು ನೆರೆದಿದ್ದರು ಒಂದು ರೀತಿಯಲ್ಲಿ ಹಬ್ಬದ ವಾತಾವರಣದ ನಡುವೆ ಸಹಾಯಹಸ್ತದ ಪಟ್ಟಿಗೆ ಹಿಡಿದ ಜೀವನ್ ಮಿತ್ರ ತಂಡ ಗಲ್ಲಿ ಗಲ್ಲಿಗಳಲ್ಲಿ ನಡು ರಾತ್ರಿ ಎನ್ನದೆ ಸಂಚರಿಸಿ ಸಾಕಷ್ಟು ಹಣ ಕ್ರೂಡಿಕರಿಸಿ ಕುಟುಂಬಕ್ಕೆ ಹಸ್ತಾಂತರಿಸಿದ ಕಾರ್ಯಕ್ಕೆ ಸಾಮಾಜಿಕಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಇದರ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ದಿನೇಶ್ ಪುತ್ರನ್,ಯೋಗೇಂದ್ರ ಪುತ್ರನ್,ಭರತ್ ಗಾಣಿಗ ಕೋಟತಟ್ಟು, ಭಾಸ್ಕರ್ ದೇವಾಡಿಗ ಕೋಟತಟ್ಟು, ಶಶಿಧರ ಪುತ್ರನ್ ಪಡುಕರೆ,ಶೇಖರ್ ಪೂಜಾರಿ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.











