ಮಣೂರು ಪಡುಕೆರೆ- ಜೈಹಿಂದ್ ಕ್ರಿಕೆಟರ್ಸ್ ವತಿಯಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಾಧಕರಿಗೆ ಗೌರವ,ಅಶಕ್ತರಿಗೆ ನೆರವು

0
432

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಜೈಹಿಂದ್ ಟ್ರೋಫಿ 2021 ಎಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟ ಶನಿವಾರ ವಿದ್ಯುಕ್ತವಾಗಿ ಚಾಲನೆ ದೊರಕಿತು.

ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಈ ಕರಾವಳಿ ಭಾಗದಲ್ಲಿ ಆಯೋಜಿಸಲಾದ ಅತಿ ದೊಡ್ಡ ಕ್ರಿಕೆಟ್ ಪಂದ್ಯಾಟ ಇದಾಗಿದ್ದು ಬರೇ ಕ್ರೀಡೆಗೆ ಸೀಮಿತಗೊಳ್ಳದೆ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು,ಸಾಧಕರಿಗೆ ಗೌರವಾರ್ಪಣೆಗಳಿಂದ ಕೂಡಿದ ಕ್ರೀಡಾಸ್ಪೂರ್ತಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ. ಇಂಥಹ ಕಾರ್ಯಕ್ರಮ ಆಯೋಜಿಸುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ.ಯುವ ಮನಸ್ಸುಗಳು ಕ್ರೀಡೆಯಲ್ಲಿ ಆಸಕ್ತಿ ವಹಿಸಿ ದೇಶ, ಅಂತಾರಾಷ್ಟ್ರೀಯ ಪ್ರತಿನಿಧಿಸುವ ಕ್ರೀಡಾ ಜ್ಯೋತಿಯಾಗಿ ಮೆರೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಗುಂಡ್ಮಿ ಉದ್ಯಮಿ ವಸಂತ್ ಕಾಂಚನ್ ವಹಿಸಿದರು.

Click Here

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಾಧಕರಾದ ರಾಜಾ ಸಾಲಿಗ್ರಾಮ, ಚಂದ್ರ ಚಾಲೆಂಜರ್ಸ್ ಕುಂದಾಪುರ,ಸಾಗರ್ ಭಂಡಾರಿ,ರವಿ ಹೆಗ್ಡೆ ಹಂಗಳೂರು ಇವರುಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಕೋಟದ ಜೀವ ರಕ್ಷಕ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ರವೀಂದ್ರ ಕೋಟ ಇವರುಗಳನ್ನು ಅಭಿನಂದಿಸಲಾಯಿತು.

ಅಶಕ್ತರಿಗೆ ಸಹಾಯಹಸ್ತ, ವಿದ್ಯಾರ್ಥಿ ನಿಧಿ ವಿತರಣೆ,ಅನಾರೋಗ್ಯ ಪೀಡಿತರಿಗೆ ನೇರವು ನೀಡಲಾಯಿತು.

ಸಭೆಯಲ್ಲಿ ಉದ್ಯಮಿ ಬೀಜು ನಾಯರ್,ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ ಸುಬ್ರಾಯ ಆಚಾರ್ಯ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ಜೈಹಿಂದ್ ಕ್ರಿಕೆಟರ್ಸ್ ಗೌರವಾಧ್ಯಕ್ಷ ದೇವಪ್ಪ ಕಾಂಚನ್,ಕೋಟ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ಟೆನಿಸ್ ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಶರತ್ ಶೆಟ್ಟಿ,ಅಧ್ಯಕ್ಷ ಗೌತಮ್ ಶೆಟ್ಟಿ, ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಪಡುಕರೆ ಇದರ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್,ಜೈಹಿಂದ್ ಕ್ರಿಕೆಟರ್ಸ್ ಗೌರವ ಸಲಹೆಗಾರ ಎಂ.ಜಯರಾಮ ಶೆಟ್ಟಿ ಸಂಸ್ಥೆಯ ಸದಸ್ಯ ಪ್ರದೀಪ್ ಪುತ್ರನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೈಹಿಂದ್ ಕ್ರಿಕೆಟರ್ಸ್ ನ ಸಂತೋಷ್ ಕುಮಾರ್ ಕೋಟ ಸ್ವಾಗತಿಸಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here