ಗಂಗೊಳ್ಳಿ : ಚಿನ್ನಾಭರಣ ಕಳ್ಳತನ ಪ್ರಕರಣ- ಆರೋಪಿಗಳ ಬಂಧನ, 2 ಲಕ್ಷ ಮೌಲ್ಯದ ಚಿನ್ನಾಭರಣ ವಶ

0
530

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ(41) ಮತ್ತು ಪ್ರಮೀಳಾ(30) ಬಂಧಿತರು.

ಇವರು ತ್ರಾಸಿಯ ಮನೆಯೊಂದರಿಂದ 16 ಗ್ರಾಂ ತೂಕದ ಚಿನ್ನದ ನೆಕ್ಲಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಕಳವು ಮಾಡಿದ್ದರು.

Click Here

ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿದ ಟಿ.ವಿ.ಎಸ್‌ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಮಾನ್ಯ ಸಿದ್ದಲಿಂಗಯ್ಯ ಟಿ ಎಸ್, ಪರಮೇಶ್ವರ ಹೆಗಡೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ಹೆಚ್ ಡಿ ಕುಲಕರ್ಣಿ ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಸವಿತೃತೇಜ್ ಪಿ ಡಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಶ್ರೀ ಹರೀಶ್ ಆರ್ (ಕಾ & ಸು), ಹಾಗೂ ಸಿಬ್ಬಂದಿಗಳಾದ ಶಾಂತರಾಮ ಶೆಟ್ಟಿ, ರಾಜು ನಾಯ್ಕ, ನಾಗರಾಜ ಹಾಗೂ ರಾಘವೇಂದ್ರ ಸಂದೀಪ ಕುರಣಿ ಮಾರುತಿ ನಾಯ್ಕ ಚಾಲಕರಾದ ದಿನೇಶ್ ರವರು ಭಾಗಹಿಸಿರುತ್ತಾರೆ.

ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಮನ್ನ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ, ಐ ಪಿ ಎಸ್ ರವರು ಅಭಿನಂದಿಸಿರುತ್ತಾರೆ.

Click Here

LEAVE A REPLY

Please enter your comment!
Please enter your name here