ಬ್ಯಾಂಕಿಂಗ್ ಎಂ.ಬಿ.ಎ ಪರೀಕ್ಷೆಗೆ ನೂತನ ಬ್ಯಾಚ್ ಉದ್ಘಾಟನೆ

0
441

Click Here

Click Here

ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶಕ್ಕೆ ಅತಿ ಹೆಚ್ಚು ಬ್ಯಾಂಕುಗಳನ್ನು ಕೊಡುಗೆಯಾಗಿ ನೀಡಿದ ಅವಳಿ ಜಿಲ್ಲೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯೋಗಕ್ಕೆ ಮತ್ತು ಬ್ಯಾಂಕ್ ಪರೀಕ್ಷೆ ಎದುರಿಸಲು ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು ಮತ್ತು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ ಇದರ ಕಾರ್ಯ ಮೆಚ್ಚುವಂತದ್ದು ಎಂದು ಕೆನರಾ ಬ್ಯಾಂಕಿನ ರಿಕವರಿ ಮ್ಯಾನೇಜರ್ ಪ್ರಭಾಕರ ಶೆಟ್ಟಿಯವರು ನೂತನ ಬ್ಯಾಚ್‍ನ್ನು ಉದ್ಘಾಟಣೆಗೊಳಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದರಲ್ಲಿ ಸಿಂಹಪಾಲು ಅನ್ಯರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಧೃಢ ನಿರ್ಧಾರ ಮಾಡಿ ಪ್ರಯತ್ನ ನಡೆಸಿದರೆ ನಿರಾಯಸವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದರು.

ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‍ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಯ ಗುಣಮಟ್ಟ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲು ಸಿದ್ದರಿದ್ದು ವಿದ್ಯಾರ್ಥಿಗಳು ಬದ್ದತೆಯೊಂದಿಗೆ ತರಗತಿಗೆ ಹಾಜರಾಗಬೇಕು ಎಂದರು.

Click Here

ಡಿ. 11 ರಿಂದ ನೂತನ ಬ್ಯಾಚ್:
ಸ್ಪೇಸ್ ಸಂಸ್ಥೆಯಲ್ಲಿ ಡಿ. 11 ರಿಂದ ನೂತನ ಬ್ಯಾಂಕಿಂಗ್ ಮತ್ತು ಎಂ.ಬಿ.ಎ ಪ್ರವೇಶ ಪರೀಕ್ಷಾ ಬ್ಯಾಚ್ ಆರಂಭಗೊಳ್ಳಲ್ಲಿದ್ದು ಡಿಸೆಂಬರ್ 11 ರಂದು 2 ರಿಂದ 5 ರ ತನಕ ತರಗತಿ ನಡೆಯಲಿದ್ದು ಪ್ರತಿ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ಬೆಳಗ್ಗೆ ಸಮಯದಲ್ಲಿ ತರಗತಿಗಳು ಶಿಕ್ಷ ಪ್ರಭಾ ಅಕಾಡೆಮಿಯ ಕುಂದೇಶ್ವರ ರಸ್ತೆಯ ಕಟ್ಟಡದಲ್ಲಿ ನಡೆಯುತ್ತದೆ. ದ್ವಿತೀಯ ಹಾಗೂ ಅಂತಿಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳ ಜೊತೆಗೆ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಕೂಡ ಇದರ ಪ್ರಯೋಜನವನ್ನು ಪಡೆಯ ಬಹುದಾಗಿದೆ.

ಈಗಾಗಲೆ ದಾಖಲಾತಿಗಳು ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಶಿಕ್ಷ ಪ್ರಭಾ ಅಕಾಡೆಮಿ ಸಂಸ್ಥೆಗೆ ಭೇಟಿ ನೀಡಬಹುದು ಅಥವಾ ತಿತಿತಿ. shikshaprabha.com ಗೆ ಲಾಗಿನ್ ಆಗಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here