ಕುಂದಾಪುರ ಮಿರರ್ ಸುದ್ದಿ…
ಕೋಟ: ಡಿ.ಜಿ. ಶೆಟ್ಟಿ ಎಜುಕೇಶನಲ್ ಸೊಸೈಟಿ ಇದರ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಾಬುಕಳ ಇಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು.
ವಿದ್ಯಾರ್ಥಿ ಸಂಘವನ್ನು ರೋಟರಿ ಕ್ಲಬ್ ನ ಆರೂರು ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿ ಮಾತನಾಡಿ ನಾಯಕನಾದವನು ನಾಲ್ಕು ಗೋಡೆಯ ಮಧ್ಯೆ ಇರುವುದಲ್ಲ ಗೋಡೆಯೊಡೆದು ಹೊರಬಂದು ವಿಕಾಸವಾಗಬೇಕು, ವಿಶಾಲವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಕೌಶಲ ಹೊರಬರಬೇಕು; ಜಗದಗಲ ಬೆಳಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ಬಾಲಕೃಷ್ಣ ಹೆಗ್ಡೆ ನಿವೃತ್ತ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರು ಒಂದು ವಿದ್ಯಾಸಂಸ್ಥೆ ಬೆಳೆಯಲು ಅದರ ಹಿಂದೆ ಒಬ್ಬ ಸಮರ್ಥ ನಾಯಕನಿರುವಂತೆ, ವಿದ್ಯಾರ್ಥಿ ಸಮಿತಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಅದರ ಹಿಂದೆ ಸರ್ವ ಸಮರ್ಥ ನಾಯಕನಿರಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಬಿ. ಡಿ. ಶೆಟ್ಟಿ ಕಾಲೇಜಿನ ಸಂಚಾಲಕ ಎ. ರತ್ನಾಕರ ಶೆಟ್ಟಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಜಿ .ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಡಿದರು. ಚೇತನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಜಿ, ವಿದ್ಯಾರ್ಥಿ ನಾಯಕ ಭರತ್, ಕಾರ್ಯದರ್ಶಿ ಮಹಿಮಾ ಶೆಣೈ ಉಪನ್ಯಾಸಕಿ ಕು. ದಿಶಾ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುಕುಮಾರ್ ಶೆಟ್ಟಿಗಾರ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಉಪನ್ಯಾಸಕರಾದ ರಮ್ಯಾ ಅತಿಥಿಗಳನ್ನು ಸ್ವಾಗತಿಸಿ,
ದಿನಕರ ಶೆಟ್ಟಿ ಹಾಗೂ ಅನುರಾಧ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಪ್ರಮಿಳಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ನಾಯಕ ಭರತ್ ವಂದಿಸಿದರು.
ಡಿ.ಜಿ. ಶೆಟ್ಟಿ ಎಜುಕೇಶನಲ್ ಸೊಸೈಟಿ ಇದರ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಾಬುಕಳ ಇಲ್ಲಿನ ವಿದ್ಯಾರ್ಥಿ ಸಂಘವನ್ನು ರೋಟರಿ ಕ್ಲಬ್ ನ ಆರೂರು ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಬಿ. ಡಿ. ಶೆಟ್ಟಿ ಕಾಲೇಜಿನ ಸಂಚಾಲಕ ಎ. ರತ್ನಾಕರ ಶೆಟ್ಟಿ. ಚೇತನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಜಿ ಮತ್ತಿತರರು ಉಪಸ್ಥಿತರಿದ್ದರು.











