ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಕೋಣಿ( ಬಸ್ರೂರು ಮೂರ್ಕೈ) ಕುಂದಾಪುರ ಕೆಡಿಎಫ್ ಕಪ್ 2025 ಸೀಸನ್ 2ರಲ್ಲಿ ಶುಭದ ಆಂಗ್ಲ ಮಾಧ್ಯಮ ಶಾಲೆಯ 55 ವಿದ್ಯಾರ್ಥಿಗಳು ಭಾಗವಹಿಸಿದ್ದು, 35 ವಿದ್ಯಾರ್ಥಿಗಳು ಪ್ರಥಮ, 15 ದ್ವಿತೀಯ ಹಾಗೂ 5 ತೃತೀಯ ಸ್ಥಾನವನ್ನು ಪಡೆದು ಓವರಾಲ್ ಚಾಂಪಿಯನ್ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ , ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.