ಕುಂದಾಪುರ :ರಾಜ್ಯ ಸರ್ಕಾರದಿಂದ ಕುಂದಾಪುರ ಪುರಸಭೆಗೆ ನೂತನವಾಗಿ ನಾಮನಿರ್ದೇಶಕ ಸದಸ್ಯರ ನೇಮಕ ಆದೇಶಪತ್ರದ ವಿತರಣೆ ಹಾಗೂ ಅಭಿನಂದನಾ ಕಾರ್ಯಾಕ್ರಮ

0
419

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರಾಜ್ಯ ಸರ್ಕಾರದಿಂದ ಕುಂದಾಪುರ ಪುರಸಭೆಗೆ ನೂತನ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಿಗೆ ಆದೇಶ ಪತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಾಕ್ರಮವು ಫೆ.೬ ರಂದು ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಅವರು ಸದಸ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಾದ ಗಣೇಶ್ ಶೇರಿಗಾರ್, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿ ರಾಜ್ ಎಂ. ಪೂಜಾರಿ ಮತ್ತು ಶಶಿಧರ ಕೋಟೆ ಅವರಿಗೆ ಆದೇಶ ಪತ್ರಗಳನ್ನು ವಿತರಿಸಿದಿದರು.

ಹಿರಿಯ ರಾಜಕಾರಣಿ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಿಗೆ ಅಭಿನಂದಿಸಿ, ರಾಜ್ಯ ಸರ್ಕಾರ ಮಹತ್ವದ ಜವಾಬ್ದಾರಿಯನ್ನು ನೀಡಿದೆ, ಅದನ್ನು ಉತ್ತಮವಾಗಿ ನಿಭಾಯಿಸಬೇಕು. ಪುರಸಭೆಯ ಅಭಿವ್ರದ್ದಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

Click Here

ಜಿಲ್ಲಾ ಗ್ಯಾರೆಂಟಿ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ ನಾಮ ನಿರ್ದೇಶಕಗೊಂಡ ಸದಸ್ಯರು, ಪುರಸಭೆಯ ಒಳಿತಿಗಾಗಿ ಶ್ರಮಿಸಬೇಕು, ಕಾಂಗ್ರೆಸಿನಿಂದ ಚುನಾಯಿತಗೊಂಡ ಸದಸ್ಯರಾಗಿರಬಹುದು, ನಾಮ ನಿರ್ದೇಶಕಗೊಂಡ ಸದಸ್ಯರಾಗಿರಬಹುದು ಅಲ್ಲದೆ ಪುರಸಭೆಯ ಇತರ ಸದಸ್ಯರಾಗಿರಬಹುದು ಅವರೆಲ್ಲರೂ ಪುರಸಭೆಯ ಹಿತಕ್ಕಾಗಿ ಪ್ರಯತ್ನ ಪಡೆಯಬೇಕು ಎಂದು ಹೇಳಿ, ಶುಭ ಕೋರಿ, ಅವರು ಅತಿಥಿಗಳು ಜೊತೆ, ನಾಮ ನಿರ್ದೇಶಕಗೊಂಡ ಸದಸ್ಯರನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ,ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಉಪಸ್ಥಿತರಿದ್ದರು.

ಸಭೆಯಲ್ಲಿ ನಾಮ ನಿರ್ದೇಶಕಗೊಂಡ ಸದಸ್ಯರನ್ನು, ಪುರಸಭೆಯ ಚುನಾಯಿತಗೊಂಡ ಸದಸ್ಯರು, , ಅಭಿಮಾನಿಗಳು, ಕುಟುಂಬಸ್ಥರು, ಅನೇಕರು ಸನ್ಮಾನಿಸಿದರು.

ಅಭಿಮಾನಿಗಳು ಪಕ್ಷಾತೀತವಾಗಿ, ತುಂಬು ಸಂಖ್ಯೆಯಲ್ಲಿ ನೆರೆದಿದ್ದರಿಂದ ಸರಳವಾಗಿ ಮುಖ್ಯ ಅಧಿಕಾರಿಯ ಕಚೇರಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮ ಪುರಸಭಾ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಕಾರ್ಯಕ್ರಮಕ್ಕೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here