ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ನೂತನ ಸಭಾಭವನ ಲೋಕಾರ್ಪಣಾ ಕಾರ್ಯಕ್ರಮ ಅಂಗವಾಗಿ ಬುಧವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚಾಲನೆಗೊಂಡಿದ್ದು ಶುಕ್ರವಾರ ಮುಂಜಾನೆ ಕನ್ನಿಕಾ ದುರ್ಗಾಪರಮೇಶ್ವರಿ ಮಹಾಗಣಪತಿ ಈಶ್ವರ ನಂದಿ ಆಂಜನೇಯ ಕಾಕವಾಹನ ನವಗ್ರಹಗಳಿಗೆ ಕಲಶಾಭಿಷೇಕ ಮಹಾಪೂಜೆ, ಚಂಡಿಕಾಹೋಮ, ಮಹಾಮಂಗಳಾರತಿ ಕಾರ್ಯಕ್ರಮಗಳು ವೇ.ಮೂ ಸಾಲಿಗ್ರಾಮ ಜನಾರ್ದನ ಅಡಿಗ ನೇತೃತ್ವದಲ್ಲಿ ಜರಗಿತು.
ಧಾರ್ಮಿಕ ವಿಧಿವಿಧಾನಗಳಲ್ಲಿ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ದಂಪತಿಗಳು ಭಾಗಿಯಾದರು.
ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತನ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಾದ ರಾಮಾಮೃತ ಭಜನಾ ತಂಡ, ಪಂಚವರ್ಣ ಮಹಿಳಾ ಭಜನಾ ಮಂಡಳಿ, ವಿಠ್ಠೋಭ ಭಜನಾ ಮಂಡಳಿ, ಶ್ರೇಯಾ ಖಾರ್ವಿ ಕುಂಚಗೂಡು ಸೇರಿದಂತೆ ವಿವಿಧ ಗಾಯನ ತಂಡಗಳಿಂದ ಗಾನಸುಧೆ ಜರಗಿದವು.
ಸಂಜೆ ಅಂತಾರಾಷ್ಟ್ರೀಯ ಯೋಗಪಟು ಬಾಲನಟಿ ಕಲಾಶ್ರೀ ತನ್ವಿತಾ ವಿ ಇವರಿಂದ ಯೋಗಾಸನ ಭರತನಾಟ್ಯ,ಮನು ಹಂದಾಡಿ ಇವರಿಂದ ನಗೆಹಬ್ಬ, ರಾತ್ರಿ 8ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಪುಣ್ಯ ಕಥಾನಕ ನೃತ್ಯರೂಪಕ ಬಿಡುವನೇ ಬ್ರಹ್ಮಲಿಂಗ ಕಾರ್ಯಕ್ರಮಗಳು ಜರಗಿದವು.
ದೇಗುಲದ ಉತ್ಸವ ಸಮಿತಿ ಪ್ರಮುಖರಾದ ದಿನೇಶ್ ಗಾಣಿಗ ಕೋಟ ಸೇರಿದಂತೆ ಮತ್ತಿತರರು ಇದ್ದರು.
ನಾಳೆ ನೂತನ ಸಭಾಭವನ ಲೋಕಾರ್ಪಣೆ
ಶ್ರೀ ದೇಗುಲ ನೂತನ ಸಭಾಭವನ ಲೋಕಾರ್ಪಣೆ ಅಂಗವಾಗಿ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶನಿ ದೇವರಿಗೆ ಕಲಾಶಾಭಿಷೇಕ,ಮಹಾಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ, ಬೆಳಿಗ್ಗೆ 9.ಗ ಸಾಮೂಹಿಕ ಶನಿ ಶಾಂತಿ, ಮಂಗಳಾರತಿ, ಪೂರ್ಣಾಹುತಿ, ಪ್ರಸಾದ ವಿತರಣೆ, ತುಲಾಭಾರ ಸೇವೆ, ದರ್ಶನ ಸೇವೆ ಅಪರಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳೊಂದಿಗೆ ನೂತನ ಸಭಾಭವನವನ್ನು ಹರಿಹರಪುರದ ಆದಿ ಶಂಕರಾಚಾರ್ಯ ಶಾರದ ಲಕ್ಷ್ಮೀನೃಸಿಂಹ ಪೀಠಾಧೀಶ್ವರ ಶ್ರೀ ಮದ್ಗ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಪಾದಂಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣೆ ನಡೆಯಲಿದೆ.
ಪಾಕಶಾಲೆಯನ್ನು ಗೋವಿಂದಬಾಬು ಪೂಜಾರಿ ಉದ್ಘಾಟಿಸಲಿದ್ದು ಶಾಸಕರು, ಸಂಸದರು, ಉದ್ಯಮಿ ಆನಂದ್ ಸಿ ಕುಂದರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿವಿಧ ಭಜನಾ ತಂಡಗಳಿಂದ ಭಜನೆ, ಗಾಯಕ ಗಣೇಶ್ ಗಂಗೊಳ್ಳಿ ಇವರಿಂದ ಭಕ್ತಿಗಾನಲಹರಿ, ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ಭಜನಾಮೃತ, ಯಕ್ಷಗಾನ ಕಾರ್ಯಕ್ರಮಗಳು ಜರಗಲಿಕ್ಕಿದೆ.











