ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ, ಫೆ14: ಕೋಡಿ ಕನ್ಯಾಣ ಇಲ್ಲಿನ ಶ್ರೀ ರಾಮದೇಗುಲದ 15ನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ, 31ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳು ಶುಕ್ರವಾರ ಜರಗಿತು.
ಈ ಪ್ರಯುಕ್ತ ಪೂರ್ವಾಹ್ನ 109 ಕಲಶ ಸ್ಥಾಪನೆ, ಅಧಿವಾಸ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಕಾಶವಾಣಿ ಕಲಾವಿದ ತಿಮ್ಮಪ್ಪ ಕರ್ಕೇರ ಬಳಗದಿಂದ ಭಕ್ತಿಸಂಗೀತ, ವಿವಿಧ ಭಜನಾ ತಂಡದಿಂದ ಭಜನೆ, ಶಿಶುಮಂದಿರದ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಪ್ರತಿಭಾ ಪುರಸ್ಕಾರ, ಚೈತನ್ಯ ಕಲಾವಿದರು ಕಾರ್ಕಳ ಬೈಲೂರು ಇವರಿಂದ ಅಷ್ಟಮಿ ನಾಟಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
ವೇ.ಮೂ ಪಾಂಡೇಶ್ವರ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇಗುಲ ಅಧ್ಯಕ್ಷ ರಾಘವೇಂದ್ರ ಕರ್ಕೇರ, ಉಪಾಧ್ಯಕ್ಷರಾದ ರಾಜು ಕರ್ಕೇರ, ಸತೀಶ್ ಜಿ.ಕುಂದರ್, ಪ್ರದಾನಕಾರ್ಯದರ್ಶಿ ಅಶೋಕ್ ಸಾಲಿಯಾನ್, ಜತೆಕಾರ್ಯದರ್ಶಿ ವಿಜಯ ಮಾಸ್ತರ್, ಮಹೇಶ್ ತಿಂಗಳಾಯ, ಕೋಶಾಧಿಕಾರಿ ಜಯಕುಮಾರ್ ಎ.ಎಸ್, ದೇಗುಲದ ಅರ್ಚಕ ಭಾಸ್ಕರ್ ಬಾಯರಿ, ಸಹಾಯಕ ಅರ್ಚಕ ರಾಮದಾಸ ಸಾಲಿಯಾನ್ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.











