ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಸಂಘಟಕರು ಆಯೋಜಿಸಿದ್ದಾರೆ ಆದರೆ ಇದೊಂದು ಪುಣ್ಯದ ಕಾರ್ಯಕ್ರಮವಾಗಿದ್ದು ಈ ಕಾರ್ಯದಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಎಂದು ಐರೋಡಿ ವಾಸುಕೀ ಸುಬ್ರಹ್ಮಣ್ಯ ದೇಗುಲದ ಮುಖ್ಯಸ್ಥ ಸುಬ್ರಹ್ಮಣ್ಯ ಮಧ್ಯಸ್ಥ ಹೇಳಿದರು.
ಶುಕ್ರವಾರ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್ ಶ್ರೀನಿವಾಸ ಕಲ್ಯಾಣೋತ್ಸವ ಕಛೇರಿಯಲ್ಲಿ ಇದೇ ಬರುವ ಎಪ್ರಿಲ್ 1ರಿಂದ 3ನೇ ತಾರೀಕಿನ ತನಕ ನಡೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಜಗತ್ತಿನ ಒಳಿತಾಗಿ ಆಗಾಗ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿರಬೇಕು. ಇದು ಲೋಕದ ಹಿತಕ್ಕಾಗಿ ಶ್ರೀನಿವಾಸ ಕಲ್ಯಾಣದಿಂದ ಧಾರ್ಮಿಕ ಪ್ರಜ್ಞೆ ಮೂಡಲಿ ಸಮಾಜ ಒಳಿತಿನೆಡೆಗೆ ಸಾಗಲಿ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಆಮಂತ್ರಣ ಪತ್ರಿಕೆಯನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುದ ಅಧ್ಯಕ್ಷ ಗಣೇಶ್ ಭಟ್ ಬಿಡುಗಡೆಗೊಳಿಸಿದರು.
ಕಲ್ಯಾಣೋತ್ಸವದ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಕಲ್ಯಾಣೋತ್ಸವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ತಿಕೇಯ ಎಸ್ಟೇಟ್ ಮಾಲಿಕರಾದ ಸುರೇಶ್ ಬೆಟ್ಟಿನ್, ಚಂದ್ರಶೇಖರ್ ಧನ್ಯ, ಅಘೋರೇಶ್ವರ ದೇಗುಲದ ಧರ್ಮದರ್ಶಿ ಚಂದ್ರಶೇಖರ್ ಕಾರಂತ್, ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ಜಿ. ವಿಠ್ಠಲ್ ಪೂಜಾರಿ ಪಾಂಡೇಶ್ವರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಪಿ. ಕೆ. ಸಾಲಿಗ್ರಾಮ ದೇಗುಲದ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್, ಸಮಿತಿಯ ಪ್ರಮುಖರಾದ ಲೀಲಾವತಿ ಗಂಗಾಧರ, ವೇ.ಮೂ ಪ್ರಸನ್ನ ತುಂಗ, ರಘು ಮಧ್ಯಸ್ಥ, ಸುಬ್ರಾಯ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆ ಸಲ್ಲಿಸಿದರು.ಸಮಿತಿಯ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ವಂದಿಸಿದರು.











