ಸಾಲಿಗ್ರಾಮ-ಸತತ ಆರು ವರ್ಷಗಳಿಂದ ಶೇ.25ರ ಡಿವಿಡೆಂಡ್ ಹಂಚಿಕೆ.

0
701

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಲಿಗ್ರಾಮ ಇದರ ಹನ್ನೊಂದನೇ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚಿಗೆ ಸಂಘದ ಆಡಳಿತ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಆನಂದ ಸಿ.ಕುಂದರ್‍ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಳೆದ ಸಾಲಿನಲ್ಲಿ ಕರೋನಾ ಆಪತ್ತು ಇದ್ದಾಗ ಕೂಡಾ ಸಾಲಗಾರ ಸದಸ್ಯರ ಮನ ವಲಿಸುವುದರ ಮೂಲಕ ಶೇ. 99 ರ ವಸೂಲಿ ಸಾಧನೆ ಗೈದು ರೂ. 23.20 ಲಕ್ಷದಷ್ಟರ ನಿವ್ವಳ ಲಾಭ ಗಳಿಸಿದೆ. ಕಳೆದ 2020.21ನೇ ಸಾಲಿನಲ್ಲಿ ರೂಪಾಯಿ ಮೂವತ್ತು ಕೋಟಿಗೂ ಅಧಿಕ ವ್ಯವಹಾರ ನಡೆಸಿ ರೂಪಾಯಿ ಒಂಬತ್ತು ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ಆರು ಕೋಟಿಗೂ ಮಿಕ್ಕಿ ಸಾಲ ವಿತರಿಸಿದೆ. ಗಳಿಸಿದ ಲಾಭದಲ್ಲಿ ಶೇ. 25 ಡಿವಿಡೆಂಟ್ ಹಂಚಿಕೆ ಮಾಡುವುದರ ಮೂಲಕ ಕಳೆದ ಸತತ ಆರು ವರ್ಷಗಳಿಂದ ಶೇ. 25 ಡಿವಿಡೆಂಟ್ ಹಂಚಿಕೆಯ ಹೆಗ್ಗಳಿಕೆ ಗಳಿಸಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಜನಾನುರಾಗಿ ಸ್ಥಳೀಯ ವೈದ್ಯರಾದ ಡಾ. ಸುಧಾಕರ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಹೆಸರುಗಳಿಸಿದ ಮಧುಸೂದನ ಬ್ಶಾರಿಯವರನ್ನು ಸನ್ಮಾನಿಸಲಾಯಿತು. ಅಲ್ಲದೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕೃತರಾದ ನರೇಂದ್ರ ಕುಮಾರ್ ಕೋಟ ಮತ್ತು ಪಿ. ವಿ. ಆನಂದ್ ಇವರುಗಳನ್ನು ಕೂಡಾ ಗೌರವಿಸಲಾಯಿತು. ಅದೇ ರೀತಿ ಕಳೆದ ಶೈಕ್ಷಣಿಕ ವರ್ಷದಲ್ಲಿ S.S.ಐ.ಅ ಮತ್ತು ದ್ವಿತೀಯ ಪಿ. ಯು. ಸಿ ಪರೀಕ್ಷೆಯಲ್ಲಿ ಶಾಲಾವಾರು ಅತ್ಯಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಆನಂದ್ ಸಿ ಕುಂದರ್ ಮಾತನಾಡಿ ಸಂಘವು ಆರಂಭದಿಂದಲೂ ಲಾಭದಲ್ಲಿದ್ದು ಪ್ರಜ್ಞಾವಂತ ಸದಸ್ಯರ ಸಹಕಾರ, ಧಕ್ಷ ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ನಿಷ್ಟಾವಂತ ಶಿಬಂಧಿಯವರ ಪ್ರಾಮಾಣಿಕ ಪ್ರಯತ್ನದ ಫಲದಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯ ಪಥದಲ್ಲಿ ಸಾಗಿ ಯಶಸ್ಸು ಕಂಡಿದೆ. ಸಂಘದ ಸ್ವಂತ ಕಛೇರಿ ಬಗ್ಗೆ ಈಗಾಗಲೇ ನಿವೇಶನವನ್ನು ಖರೀದಿಸಿದ್ದು ಸದ್ಯದಲ್ಲಿಯೇ ಸುಸ್ಸಜ್ಜಿತ ಕಟ್ಟಡ ನಿರ್ಮಿಸಿ ಸದಸ್ಯರ ಸೇವೆಗೆ ಅರ್ಪಿಸುವ ಯೋಜನೆ ಹೊಂದಿದೆ ಎಂದರು.

Click Here

ಕಟ್ಟಡ ನಿರ್ಮಾಣದ ಬಗ್ಗೆ ಕಡಿಮೆ ಬೀಳುವ ಮೊತ್ತವನ್ನು ಆಪದ್ದನ ನಿಧಿಯಿಂದ ರೂ. 20.00 ಲಕ್ಷ ಕ್ಷೇಮ ನಿಧಿಗೆ ವರ್ಗಾಯಿಸುವರೆ ಸರ್ವಾನುಮತದಿಂದ ಅನುಮತಿಯಿತ್ತ ಸರ್ವ ಸದಸ್ಯರನ್ನು ಅಭಿನಂದಿಸಿದರು. ಪ್ರಚಲಿತ ವರ್ಷದ ಕ್ರಿಯಾಯೋಜನೆಯಲ್ಲಿ ಕರೋನಾ ಮಹಾಮಾರಿ ಭೀಕರ ಕಾಯಿಲೆಗಳಿಗೆ ಬಲಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಸದಸ್ಯರು ಮತ್ತು ಅವರ ಅವಲಂಭಿತರಿಗೆ ರೂ. 10,000.00 ದ ನೆರವು ನೀಡುವ ಯೋಜನೆ ಹೊಂದಿದೆ ಮತ್ತು ಎಂದಿನಂತೆ ಮಣಿಪಾಲ ಆರೋಗ್ಯ ಕಾರ್ಡ್ ಸವಲತ್ತನ್ನು ವಿಸ್ತರಿಸುತ್ತಿದ್ದು ಇಂತಹ ಹತ್ತು ಹಲವು ಯೋಜನೆಗಳ ಪೂರ್ಣ ಪ್ರಯೋಜನ ಪಡೆಯುವಂತೆ ಕರೆಯಿತ್ತರು.

ಸಂಘದ ಶಾಸನ ಬದ್ದ ಲೆಕ್ಕ ಪರಿಶೋಧಕ ಪದ್ಮನಾಭ ಕಾಂಚನ್ ಸಂಘದ ಕ್ರಮಬದ್ದವಾದ ಕಾರ್ಯನಿರ್ವಹಣೆ, ವಸೂಲಿ ಪ್ರಮಾಣ ಮತ್ತು ಸಹಕಾರಿ ತತ್ವಗಳಿಗೆ ಒತ್ತು ನೀಡುತ್ತಿರುವುದನ್ನು ಪರಿಗಣಿಸಿ “ಅ” ವರ್ಗದ ಆಡಿಟ್ ವರ್ಗೀಕರಣಕ್ಕೆ ಅರ್ಹತೆ ಹೊಂದಿರುವುದು ಪ್ರಶಂಸನೀಯ ಎಂದರು.

ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು ಕಾರ್ಯಾಸೂಚಿಯಲ್ಲಿನ ಪ್ರತಿಯೊಂದು ವಿಷüಯವನ್ನು ಸಭೆಯಲ್ಲಿ ಮಂಡಿಸಿ ವಿವರಗಳನ್ನು ನೀಡಿ ಸರ್ವಾನುಮತದ ಅನುಮೋದನೆ ಪಡೆದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಜಿ, ನಿರ್ದೇಶಕರುಗಳಾದ ಮಂಜುನಾಥ ಎಸ್.ಕೆ., ಡಾ.ಕೆ.ಕೃಷ್ಣ ಕಾಂಚನ್, ಮಧುಸೂದನ ಐತಾಳ, ಕೆ. ಶಂಕರ ಬಂಗೇರ, ವಸಂತ ಶೆಟ್ಟಿ, ಡಾ.ಸತೀಶ ಪೂಜಾರಿ, ವೈ. ಕೃಷ್ಣಮೂರ್ತಿ ಐತಾಳ ಶಾಂತಾ ಭಟ್ ಮತ್ತು ನಾಗರತ್ನ ಬಾೈರಿ, ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎಸ್. ಸೋಮಯಾಜಿಯವರು ಕಳೆದ ಸಾಲಿನ ವರದಿ ಮಂಡಿಸಿದರು. ಶಾಂತಾ ಭಟ್ಟ ನಿರ್ದೇಶಕಿ ಇವರು ವಂದಿಸಿದರು.

Click Here

LEAVE A REPLY

Please enter your comment!
Please enter your name here