ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಭಾರತ ದೇಶದಲ್ಲಿ ಯುವಜನತೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಶೇ.55%ಕ್ಕಿಂತ ಯುವಸಂಪತ್ತು ನಮ್ಮ ದೇಶದಲ್ಲಿದೆ. ಜಾಗೃತ ಯುವಶಕ್ತಿ ಸಂಘಟಿತವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುತ್ತಿರುವುದು ಕಾಣುತ್ತಿದ್ದೇವೆ. ಸಶಕ್ತ ಯುವಜನತೆ ಸದುದ್ದೇಶದಿಂದ ಜಾತಿಮತ ಧರ್ಮಬೇಧವಿಲ್ಲದೆ ಗ್ರಾಮದ ಒಳಿತಿಗೆ ತೊಡಗಿಸಿಕೊಳ್ಳುವುದರಿಂದ ಸಮಾಜದ ಏಳಿಗೆ ಸಾಧ್ಯ ಎಂದು ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.
ಅವರು ಫೆ.22ರಂದು ವಂಡ್ಸೆ ಆತ್ರಾಡಿಯ ಕಂಬಳÀಗದ್ದೆ ವಠಾರದಲ್ಲಿ ಜರಗಿದ ಮಾತೃಭೂಮಿ ಯುವ ಸಂಘಟನೆಯ 8ನೇ ವರ್ಷದ ವರ್ಷೋತ್ಸವ ‘ಯುವ ಸಂಭ್ರಮ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಮೇಲೂ ಹಲವು ಋಣಗಳು ಇರುತ್ತದೆ. ಸಮಾಜದ ಋಣವನ್ನು ಪ್ರತಿಯೊಬ್ಬರು ತೀರಿಸಬೇಕು. ಈ ಸಂಘಟನೆಯನ್ನು ನಾನೇ ಉದ್ಘಾಟಿಸಿದ್ದೆ. ಅಂದಿನಿಂತ ಇಂದಿನ ತನಕ ನಿರಂತರವಾಗಿ ಕಾರ್ಯಚಟುವಟಿಕೆಯಿಂದ ಮುನ್ನೆಡೆಯುತ್ತಿರುವುದು ಸಂತೋಷದ ವಿಚಾರ ಎಂದರು.
ಮಾತೃಭೂಮಿ ಯುವ ಸಂಘಟನೆಯ ಅಧ್ಯಕ್ಷ ಶಶಿಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕೈಗಾರಿಕೋದ್ಯಮಿ ಎನ್.ರಮೇಶ ದೇವಾಡಿಗ ಅಡಿಕೆಕೊಡ್ಲು ಇವರನ್ನು ಸನ್ಮಾನಿಸಿ ಮಾತನಾಡಿ, ಯುವ ಜನತೆ ಸಂಘಟಿತರಾಗಿ ತೊಡಗಿಸಿಕೊಳ್ಳುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ. ಮಾತೃಭೂಮಿ ಯುವ ಸಂಘಟನೆ ಈ ಭಾಗದಲ್ಲಿ ಜನಮಾನಸಲ್ಲಿ ಉಳಿಯುವಂತಹ ಕೆಲಸ ಮಾಡುತ್ತಿದೆ ಎಂದರು.
ಬೆಂಗಳೂರು ಉದ್ಯಮಿ ಬಿ.ಎಂ.ಬಾಳಿಕೆರೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಂಡ್ಸೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವಿನಾಶ್ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ ಪ್ರಶಸ್ತಿ ಪುರಸ್ಕೃತರಾದ ಕೈಗಾರಿಕೋದ್ಯಮಿ ಎನ್.ರಮೇಶ ದೇವಾಡಿಗ ಅಡಿಕೆಕೊಡ್ಲು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ ದೇವಾಡಿಗ ಅವರು ಮಾತೃಭೂಮಿ ಯುವ ಸಂಘಟನೆ ಸಮಾಜ ಆಗುಹೋಗುಗಳಲ್ಲಿ ಸ್ಪಂದಿಸುತ್ತಾ ಬಂದಿದೆ. ಆತ್ರಾಡಿಯಂಥಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನೆಡೆಯುತ್ತಿದೆ. ಯುವಜನತೆ ಸಂಘಟನಾಶಕ್ತಿಯಿಂದ ಏನೂ ಬೇಕಾದರೂ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ತಾ.ಪಂ. ಮಾಜಿ ಸದಸ್ಯರಾದ ಉದಯ ಜಿ.ಪೂಜಾರಿ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ, ಶ್ರೀ ಮೂಕಾಂಬಿಕಾ ಸೇವಾ ಸಹಕಾರಿ ಸಂಘ ವಂಡ್ಸೆ ಇದರ ಅಧ್ಯಕ್ಷರಾದ ಪ್ರದೀಪ ಕುಮಾರ್ ಶೆಟ್ಟಿ, ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಮಂಜುನಾಥ ಶೆಟ್ಟಿ ನಂದ್ರೋಳ್ಳಿ, ಉದ್ಯಮಿ ಶಶಿಧರ ಶೆಟ್ಟಿ ಕೊರಾಡಿಮನೆ ವಂಡ್ಸೆ, ಆತ್ರಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕುಸುಮಾಕರ ಶೆಟ್ಟಿ, ಉದ್ಯಮಿ ಜಯರಾಮ ಶೆಟ್ಟಿ ಬೆಳ್ವಾಣ, ಗಣೇಶ ಶೆಟ್ಟಿ ಕೆರಾಡಿ, ಶ್ರೀಧರ ಆಚಾರ್ಯ ಆಲೂರು ಭಾಗವಹಿಸಿದ್ದರು.
ಮಾತೃಭೂಮಿ ಯುವ ಸಂಘಟನೆ ಗೌರವಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ವಿನಂತ ಗಾಣಿಗ ಉಪಸ್ಥಿತರಿದ್ದರು. ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.
2024ನೇ ಶೈಕ್ಷಣಿಕ ಸಾಧನೆ ಮಾಡಿದ ಆಯುಷ್ ಕಲ್ಮಡಿ, ರೋಹಿತ್ ಬಳಗೇರಿ, ರಕ್ಷಿತಾ ಅಡಿಕೆಕೊಡ್ಲು ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೈದ್ಯಕೀಯ ಸಹಾಯಧನ ವಿತರಿಸಲಾಯಿತು.
ಮಾತೃಭೂಮಿ ಯುವ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಸಂದೇಶ ಶೆಟ್ಟಿ ಅಡಿಕೆಕೊಡ್ಲು ಸ್ವಾಗತಿಸಿದರು. ದಿವ್ಯಾಶ್ರೀ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಸಂಘಟನೆಯ ಸ್ಥಾಪಕ ಅಧ್ಯಕ್ಷ ಗಣೇಶ ದೇವಾಡಿಗ ಅಡಿಕೆಕೊಡ್ಲು ವರದಿ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಜೊತೆ ಕ್ರೀಡಾ ಕಾರ್ಯದರ್ಶಿ ಧರ್ಮ ಗುಂದಿನಮನೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗೌರವ ಸಲಹೆಗಾರರಾದ ವಿಠಲ ಆಚಾರ್ಯ ಸಾಧಕ ವಿದ್ಯಾರ್ಥಿಗಳ ಪರಿಚಯಿಸಿದರು. ಉದಯ ಅಂಗಡಿಮನೆ ಹೊಸ ಸದಸ್ಯರ ಪಟ್ಟಿ ವಾಚಿಸಿದರು. ಗೌರವ ಸಲಹೆಗಾರರಾದ ಶಂಕರ ಆಚಾರ್ಯ ಆತ್ರಾಡಿ (ಕಾರ್ಯದರ್ಶಿ,, ಜಡ್ಕಲ್ ಗ್ರಾ.ಪಂ) ವಂದಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.
ಸ್ಥಳೀಯ ಪುಟಾಣಿಗಳಿಂದ ಯಕ್ಷ ನೃತ್ಯ, ಭರತನಾಟ್ಯ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದ ಕಲಾವಿದರಿಂದ ‘ಮಂದಾರ್ತಿ ಮಾದೇವಿ’ ನೃತ್ಯ ರೂಪಕ ನಡೆಯಿತು. ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ‘ವೀರ ಬರ್ಭರಿಕ’ ಪ್ರದರ್ಶನಗೊಂಡಿತು.











