ಕುಂದಾಪುರ ಮಿರರ್ ಸುದ್ದಿ…
ಕೋಟ: ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಡಿ.12ರಂದು ನಡೆಯುವ ನೂರನೇ ವಾರದ ಸ್ವಚ್ಛತಾ ಸಂಭ್ರಮದ ಅಂಗವಾಗಿ ಬೃಹತ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಸುರೇಂದ್ರ ಕೋಟ ರಚನೆ, ನಿರ್ದೇಶನದಲ್ಲಿ ‘ಶ್ರೀ ಅಮ್ಮ ಕ್ರೀಯೇಶನ್ಸ್’ ಅಡಿಯಲ್ಲಿ ಹ್ವಾಯ್ ನೀವಾ? ತಂಡದಿಂದ ಪರಿಸರ ಜಾಗೃತಿ ಕಿರು ಚಿತ್ರ “ಮನಸ್ಸು -ಕಸ” ಪಂಚವರ್ಣ ಯುವಕ ಮಂಡಲ ಕೋಟದ ನೂರನೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಅರ್ಪಣೆಯಾಗಿ ಬಿಡುಗಡೆಗೊಳ್ಳಲಿದೆ.
ಮಣೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟ ಹಿರೇಮಹಾಲಿಂಗೇಶ್ವರ ದೇವಳದ ವರೆಗೆ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಬಿಡುಗಡೆಗೊಳಿಸಲಿದ್ದಾರೆ ಎಂದು ಕಿರುಚಿತ್ರದ ಸಂಯೋಜಕ ಸುರೇಂದ್ರ ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











