ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚೆಗೆ ಸಾಲಿಗ್ರಾಮದಲ್ಲಿ ಜರುಗಿದ ಕೇಂದ್ರ ಸಂಸ್ಥೆಯ 68ನೇ ವಾರ್ಷಿಕ ಮಹಾಸಭೆಯಲ್ಲಿ ಮೈಸೂರು ಅಂಗಸಂಸ್ಥೆಯ ಸತೀಶ್ ಹಂದೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕೇಂದ್ರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಹಂದೆಯವರು ಮೈಸೂರಿನ ಗುರುನರಸಿಂಹ ಮಿತ್ರಮಂಡಲಿಯ ಕಾರ್ಯದರ್ಶಿಯಾಗಿ ಅನೇಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿದ್ಯಾರ್ಥಿವೇತನವಾಗಿ ನೀಡುತ್ತಾ ಬಂದಿದ್ದು ಅನೇಕರ ಭವಿಷ್ಯವನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಉಲ್ಲೇಖನೀಯ.










