ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿ ಕುಂದಾಪುರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಕುಂದಾಪುರದ ಚೈತನ್ಯ ವೃದ್ದಾಶ್ರಮದಲ್ಲಿ ಹಣ್ಣು ಹಂಪಲು, ಸಿಹಿ ತಿಂಡಿ ಮತ್ತು ಮಧ್ಯಾಹ್ನದ ಊಟ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕುಂದಾಪುರ ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿಯ ಅಧ್ಯಕ್ಷೆ ಗುಣರತ್ನ ಮಾತನಾಡಿ. ಮಹಿಳೆಯ ಹಕ್ಕು ಮತ್ತು ಸಮಾನತೆಗಾಗಿ ಹೋರಾಟದ ನೆನಪಿನಲ್ಲಿ 1907ರಲ್ಲಿ ಆರಂಭವಾದ ವಿಶ್ವ ಮಹಿಳಾ ದಿನಾಚರಣೆ 1910ರಲ್ಲಿ ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ. ಮಹಿಳೆಯ ಮಹತ್ವಿಕೆ, ಸಾಧನೆ, ಸಮಾನತೆಯ ವಿಚಾರವನ್ನು ಪ್ರಚುರ ಪಡಿಸುವುದು, ಸ್ವಾವಲಂಬಿಯಾಗಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಈ ಅಚರಣೆಯ ಉದ್ದೇಶವಾಗಿದೆ. ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿ ಕುಂದಾಪುರ ಪ್ರತಿ ವರ್ಷ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷವೂ ಕೂಡಾ ಚೈತನ್ಯ ವೃದ್ದಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರಿಂದ ಅದರ ಮಹತ್ವ ಪರಿಣಾಮಕಾರಿಯಾಗುತ್ತದೆ ಎಂದು ಅವರು ಹೇಳಿ ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯ ಹೇಳಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿಯ ಯೋಜನೆಯ ಮೇಲ್ವಿಚಾರಕಿ ಲಲಿತಾ ಕುಂದಾಪುರ ಹಾಗು ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿಯ ಸದಸ್ಯರು, ಚೈತನ್ಯ ವೃದ್ದಾಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು.











