ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸ್ವರ್ಣ ಮುಖಿ ರಂಗ ಮಂಟಪದಲ್ಲಿ ಮಾ. 9ರಂದು ಸರಕಾರದ ಮಾಂಗಲ್ಯ ಭಾಗ್ಯ ಕಾರ್ಯಕ್ರಮದಡಿ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ 4 ಜೋಡಿಗಳು ಹಸೆಮಣೆ ಏರಿದರು. ದೇಗುಲದ ಪುರೋಹಿತ ಗಜಾನನ ಜೋಯಿಸ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬುಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ವಧು ವರರಿಗೆ ಶುಭ ಕೋರಿದರು. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ, ಸುರೇಂದ್ರ ಶೆಟ್ಟಿ ಮಹಾಲಿಂಗ ನಾಯ್ಕ, ಸುಧಾ ಕೆ, ಧನಾಕ್ಷಿ, ವಧು-ವರರ ಕುಟುಂಬದ ಸದಸ್ಯರು, ದೇಗುಲದ ಅರ್ಚಕರು, ಸಿಬಂದಿಗಳು ಉಪಸ್ಥಿತರಿದ್ದರು. ವಧು ವರರಿಗೆ ತಾಳಿ, ಸೀರೆ, ಪಂಚೆ, ನಗದು ಹಣ ಸರಕಾರದ ಯೋಜನೆ ಕ್ರಮದಂತೆ ಒದಗಿಸಲಾಗಿತ್ತು.











