ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಚಾಲನೆಗೊಂಡಿತು.
ಕಾರ್ಯಕ್ರಮವನ್ನು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದೇಗುಲದ ಜೀರ್ಣೋದ್ಧಾರ ಸಮಿತಿಯ ಎಂ.ಎನ್. ಮಧ್ಯಸ್ಥ, ವಿಷ್ಣುಮೂರ್ತಿ ಮಯ್ಯ, ಅರುಣಾಚಲ ಮಯ್ಯ, ದೇಗುಲದ ಆಡಳಿತ ಟ್ರಸ್ಟಿಗಳು, ಹರ್ತಟ್ಟು ಛಾಯಾ ತರಂಗಿಣಿ ಇದರ ಮುಖ್ಯಸ್ಥರಾದ ಭಾಗೇಶ್ವರಿ ಗೋಪಾಕೃಷ್ಣ ಮಯ್ಯ, ಸ್ನೇಹಕೂಟದ ಸಂಚಾಲಕಿ ಭಾರತಿ ವಿ. ಮಯ್ಯ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರ್ತಟ್ಟು ಛಾಯಾ ತರಂಗಿಣಿ, ಸ್ನೇಹಕೂಟ ಮಣೂರು ಇವರಿಂದ ಸಾಂಸ್ಕೃತಿಕ ಸಿರಿ ಪ್ರದರ್ಶನಗೊಂಡಿತು.











