ಕುಂದಾಪುರ ಮಿರರ್ ಸುದ್ದಿ…
ಕೋಟ :ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್‌ಸಿಂಗ್ ಯುವ ವೇದಿಕೆ ಕೋಟ ಆಶ್ರಯದಲ್ಲಿ ಎ.13ಕ್ಕೆ ಇಲ್ಲಿನ ಡಾ.ಸತೀಶ್ ಪೂಜಾರಿ ವೇದಿಕೆಯಲ್ಲಿ ಸ್ಪರ್ಶ ಕಾರ್ಯಕ್ರಮ ಜರಗಲಿದೆ ಎಂದು ಭಗತ್‌ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾತ್ರಿ ೬ರಿಂದ ಆರಂಭಗೊಳ್ಳಲಿರುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಕೋಟ ಸುರೇಶ್ ಅವರಿಗೆ ಹುಟ್ಟೂರು ಸಮ್ಮಾನ ನೀಡಿ ಗೌರವಿಸಲಾಗುವುದು ಎಂದರು.
ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಮಾತನಾಡಿ,
ಕಾರ್‍ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಶಂಕರ್ ಮಂಜೇಶ್ವರ, ಧಾರ್ಮಿಕ ಸೇವಕ ಆನಂದ ದೇವಾಡಿಗ ಕೋಟ, ಬಡಗಿ ಮಹಾಬಲ ಆಚಾರ್ಯ, ಕೃಷಿಕ ಶೇಖರ ಶೆಟ್ಟಿ,
ಲಕ್ಷ್ಮೀ ಮಡಿವಾಳ್ತಿ, ಸಮಾಜ ಸೇವಕ ಚಂದ್ರ ಆಚಾರ್ಯ ಕೋಟ, ವಾದ್ಯಗೋಷ್ಠಿಯ ಜಾರ್ಜ್ ವಿಲ್ಸನ್, ದರ್ಜಿ ಪ್ರಭಾಕರ ಆಚಾರ್‍ಯ, ಕಂಬಳ ಕ್ಷೇತ್ರದ ರಮೇಶ್ ಪೂಜಾರಿ, ಕೃಷಿಕ
ಸತೀಶ್ ಶೆಟ್ಟಿ, ರಕ್ತದಾನಿ ದಿನೇಶ್ ಕಾಂಚನ್, ಉರಗ ರಕ್ಷಕ ವಿಜಯ ಪೂಜಾರಿಯವರನ್ನು ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ. ಶಮಂತ್ ಕುಮಾರ್, ಡಾ. ಚೈತ್ರ ಭರತ್ ಶೆಟ್ಟಿ, ಡಾ. ಗಜೇಂದ್ರ ಗುಳ್ವಾಡಿ ಅವರನ್ನು ಗೌರವಿಸಲಾಗುವುದು. ಪವರ್ ಮಹಿಳಾ ಸಂಘಟನೆ ಉಡುಪಿ, ಕೋಡಿಯ ಪ್ರಗತಿ ಯುವಕ ಸಂಘಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು. ಸಭಾ ಕಾರ್‍ಯಕ್ರಮದ ಅನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೊತ್ತ ಮೊದಲ ಬಾರಿಗೆ ಶಿವಾಜಿ ನಾಟಕ ಕನ್ನಡದಲ್ಲಿ ಪ್ರದರ್ಶನ ನಡೆಯಲಿದೆ ಎಂದರು.
ಪದಾಧಿಕಾರಿಗಳಾದ ಚಂದ್ರ ಪೂಜಾರಿ, ಅಜಿತ್ ದೇವಾಡಿಗ, ಪಾಂಡು ಪೂಜಾರಿ ಇದ್ದರು.











