ಕೋಡಿ ಕನ್ಯಾಣ :ಕರಾವಳಿ ಜನರ ಜೀವನಾಡಿ ಪಚ್ಚಿಲೆ ಕೃಷಿ- ಕಿರಣ್ ಕುಮಾರ್ ಕೊಡ್ಗಿ

0
649

Click Here

Click Here

ಪಚ್ಚಿಲೆ ಕ್ಷೇತ್ರೋತ್ಸವ – 2025 ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರಾವಳಿ ಭಾಗದ ಜೀವನಾಡಿಯಾಗಿ ಪಚ್ಚಿಲೆ ಸೇರಿದಂತೆ ಇನ್ನಿತರ ಮೀನುಗಾರಿಕಾ ಕೃಷಿ ವಿಶೇಷವಾಗಿ ಗಮನ ಸೆಳೆಯುತ್ತಿದೆ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.

ಶುಕ್ರವಾರ ಕೋಡಿ ಕನ್ಯಾಣದಲ್ಲಿ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೋವಾ, ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ -ಉಡುಪಿ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ-ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಅರಬ್ಬಿ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಮನ್ವಯ ಸಮಿತಿ, ಸ್ಕೋಡ್ ವೆಸ್ ಸಂಸ್ಥೆ, ಆಯುಶ್ಚಾನ್ ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ. ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ. ಜಂಟಿಯಾಗಿ ಆಯೋಜಿಸಿರುವ ಪಚ್ಚಿಲೆ ಕ್ಷೇತ್ರೋತ್ಸವ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜನಸಾಮಾನ್ಯರಿಗೆ ಸ್ವಾವಲಬಿ ಬದುಕು ಕಾಣಲು ಇಂಥಹ ಹೊಸ ಹೊಸ ಯೋಚನೆಗಳು ಯೋಜನೆಗಳು ಕಾರ್ಯಗತಗೊಳ್ಳಬೇಕು ಆ ಮೂಲಕ ಒಂದಿಷ್ಟು ಜನರಿಗೆ ಉದ್ಯೋಗಾವಕಾಶಗಳು ಲಭಿಸಲು ಸಾಧ್ಯ ಈ ನಿಟ್ಟಿನಲ್ಲಿ ಕ್ಷೇತ್ರೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.

Click Here

ಕಾರ್ಯಕ್ರಮವನ್ನು ಉಡುಪಿ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸೇರಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದ ಗಣಪ ಪೂಜಾರಿ,ಶಾರದ ಕೃಷ್ಣ ಖಾರ್ವಿ, ಗೀತಾ ಶ್ರೀನಿವಾಸ ಖಾರ್ವಿ, ಸುಶ್ಮಿತಾ ಇವರುಗಳನ್ನು ಕೃಷಿ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಗಳ ಅಧಿಕಾರಿಗಳಾದ ರವಿ, ಸಚಿನ್, ಹಿರಿಯ ವಿಜ್ಞಾನಿ ಶ್ರೀಕಾಂತ್ ಜಿ.ಬಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸದಾನಂದ ಆಚಾರ್ಯ ಬಿ, ಮಣೂರು ಪ್ರಾಥಮಿಕ ಮೀನುಗಾರ ಸಂಘದ ನಿರ್ದೇಶಕ ರವೀಂದ್ರ ತಿಂಗಳಾಯ, ಆಪ್ತ ಸಾಕ್ಷರತಾ ಸಮಾಲೋಚಕ ಕೇಂದ್ರ ಉಡುಪಿ ಇದರ ಅರ್ಪಿತಾ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ಬೇಬಿ ಮೆಂಡನ್, ಉಡುಪಿ ಕಿನಾರ ಮೀನುಗಾರ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನಾ ಕೋಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಂಗಾಧರ್ ಸ್ವಾಗತಿಸಿ ನಿರೂಪಿಸಿದರು ವಂದಿಸಿದರು.

Click Here

LEAVE A REPLY

Please enter your comment!
Please enter your name here