ಕೋಟ :ನಮ್ಮ ಕರಾವಳಿ ಜಾನಪದ ಸೊಗಡಿಗೆ ಸರಿಸಾಟಿ ಇಲ್ಲ- ಆನಂದ್ ಸಿ ಕುಂದರ್ – ಪಡುಕರೆ ಕಾಲೇಜಿನಲ್ಲಿ ಜಾನಪದನೋತ್ಸವಕ್ಕೆ ಚಾಲನೆ

0
391

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರಾವಳಿಯ ಜಾನಪದದ ಸೊಗಡಿಗೆ ಸರಿಸಾಟಿಯೇ ಇಲ್ಲ, ಇಲ್ಲಿನ ಜಾನಪದ ಬದುಕಿನ ಪರಿಭಾಷೆ ವಿಶಿಷ್ಟವಾದದ್ದು ಎಂದು ಉದ್ಯಮಿ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.

ಬುಧವಾರ ಕೋಟದ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ಜಾನಪದ ಹಬ್ಬ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿನ ಜಾನಪದಲ್ಲಿ ವಿವಿಧ ತರಹದ ಬದುಕಿನ ಚಹರೆಗಳಿವೆ ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡ್ಯೋಯ ಬೇಕಿದೆ ಎಂದರಲ್ಲದೆ ಗತವೈಭವ ಮತ್ತೆ ಮರುಕಳಿಸಬೇಕಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ವಹಿಸಿದ್ದರು.

Click Here

ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕೋಟತಟ್ಟು ಶಾಂತಾ ಐತಾಳ್ ಇವರನ್ನು ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಉಪನ್ಯಾಸಕರಾದ ರಮೇಶ್ ಆಚಾರ್,ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಶಂಕರ್ ನಾಯ್ಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಭೂಮಿಕ ನಿರೂಪಿಸಿ ವಂದಿಸಿದರು.

ಜಾನಪದ ಸೊಗಡಿಗೆ ವಿಶಿಷ್ಟ ಆಯೋಜನೆ
ಜಾನಪದ ಹಬ್ಬದ ಅಂಗವಾಗಿ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಯೋಜಿಸಿದ್ದು ಗಣ್ಯರಿಗೆ ಕಾಲು ತೊಳೆಯಲು ನೀರು ನೀಡಿ ಆಹ್ವಾನಿಸಲಾಯಿತು. ಒಳ ಪ್ರವೇಶಿಸುತ್ತಿದಂತೆ ಬೆಲ್ಲ ನೀರು ಕೊಟ್ಟು ಸಭಾಂಗಣದ ಒಳಗೆ ಪ್ರವೇಶಿಸಲಾಯಿತು. ನಂತರ ಕಾಲೇಜಿನ ಒಳ ಸಭಾಂಗಣದಲ್ಲಿ ಜಾನಪದ ಪರಿಕರ ಪ್ರದರ್ಶನ ಏರ್ಪಡಿಸಿದ್ದು, ವಿದ್ಯಾರ್ಥಿಗಳು ತೆಂಗಿನ ಗರಿಯಲ್ಲಿ ಚಪ್ಪರಗೈದು ,ರಂಗೋಲಿ ಬಿಡಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅಡಿಕೆ ಹಾಳೆ ತೊಡಿಸಿ ವಿಳ್ಳೇದೆಲೆ ಅಡಿಕೆ ನೀಡಿ ಸ್ವಾಗತಿಸಲಾಯಿತು. ಅಡಿಕೆ ಸಿಂಗಾರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

Click Here

LEAVE A REPLY

Please enter your comment!
Please enter your name here