ತೆಕ್ಕಟ್ಟೆ- ಬೇಸಿಗೆ ಶಿಬಿರಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣ – ಪತ್ರಕರ್ತ ರವೀಂದ್ರ ಕೋಟ

0
570

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮುನ್ನುಡಿ ಬರೆಯಲಿದೆ. ಈ ದಿಸೆಯಲ್ಲಿ ಯಶಸ್ವಿ ಕಲಾವೃಂದ ಕಳೆದ ಸಾಕಷ್ಟು ವರ್ಷಗಳಿಂದ ಶಿಬಿರ ಆಯೋಜಿಸುವ ಮೂಲಕ ಹಲವು ಪ್ರತಿಭೆಗಳನ್ನು ಹೊರಹೊಮ್ಮಿಸಿದೆ ಎಂದು ಪತ್ರಕರ್ತ ರವೀಂದ್ರ ಕೋಟ ನುಡಿದರು.

ಗುರುವಾರ ತೆಕ್ಕಟ್ಟೆ ಯಶಸ್ವಿ ಕಲಾವೃಂದ ಆಯೋಜಿಸುತ್ತಿರುವ ಬೇಸಿಗೆ ಶಿಬಿರ ರಜಾರಂಗು 14ನೇ ದಿನದ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ ವರ್ಷವಿಡೀ ಶೈಕ್ಷಣಿಕವಾಗಿ ಕಳೆಯುವ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ತೊರಬೇಕು . ಈ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಜಗಕ್ಕೆ ಪಸರಿಸಬೇಕು, ಸಂಘ ಸಂಸ್ಥೆಗಳು ಶಿಬಿರ ಆಯೋಜಿಸುವುದು ಸುಲಭದ ಮಾತಲ್ಲ ಅವರೊಂದಿಗೆ ಪೋಷಕರು ಕೈಜೋಡಿಸುವಂತ್ತಾಗಬೇಕು. ಪರಿಸರ ಕಾಳಜಿ, ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

Click Here

ಸಭೆಯಲ್ಲಿ ಕೋಟ ಮಣೂರು ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಹೆರಿಯ ಮಾಸ್ಟರ್, ಶಿಬಿರಾರ್ಥಿ ಪೂರ್ವಿ, ಯಶಸ್ವಿ ಕಲಾವೃಂದದ ಸಂಯೋಜಕ ವೆಂಕಟೇಶ್ ವೈದ್ಯ, ಶಿಬಿರದ ತರಬೇತುದಾರರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಶಾರದ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗುರುವಿಕ್ರಮ ನಿರೂಪಿಸಿದರು. ಅತಿಥಿ ಪರಿಚಯ ವಶಿಷ್ಠ ಗೈದರು, ದಿನಚರಿಯನ್ನು ವಿಘ್ನರಾಜ ವಾಚಿಸಿದರು. ನಿಶ್ಚಯ ವಂದಿಸಿದರು.

Click Here

LEAVE A REPLY

Please enter your comment!
Please enter your name here