ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾದ ಇಲ್ಲಿನ ಕೋಟ ಗ್ರಾ.ಪಂ ವ್ಯಾಪ್ತಿಯ ಮಣೂರು ಪಡುಕರೆಯ ನಿವಾಸಿ ಸುರೇಶ್ ಮರಕಾಲ ಕುಟುಂಬಕ್ಕೆ ಸಮಾಜಸೇವಕ ಆನಂದ್ ಸಿ ಕುಂದರ್ ತಮ್ಮ 77ನೇ ಹುಟ್ಟು ಹಬ್ಬದ ಅಂಗವಾಗಿ ಮನೆ ನಿರ್ಮಿಸಿ ಬಡ ಕುಟುಂಬಕ್ಕೆ ಆಸೆರೆಯಾದರು.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ್ ಸಿ. ಕುಂದರ್ ಮನೆಯ ಕೀ ಹಸ್ತಾಂತರಿಸಿ ದೀಪ ಬೆಳಗಿಸಿದರು.
ಈ ವೇಳೆ ಮಾತನಾಡಿದ ಅವರು ಬಡ ನಿರ್ಗತಿಕ ಕುಟುಂಬವಾದ ಸುರೇಶ್ ಮರಕಾಲ ಪತ್ನಿ ಇರ್ವರು ಮಕ್ಕಳನ್ನು ಸಲಹುತ್ತಿದ್ದು ಅಶಕ್ತತೆಯನ್ನು ಮನಗಂಡು ಈ ಸಹಾಯ ಹಸ್ತ ನಮ್ಮ ಟ್ರಸ್ಟ್ ವತಿಯಿಂದ ಮಾಡಿದ್ದೇವೆ ಎಂದರು.
ಗೃಹಪ್ರವೇಶದ ಹಿನ್ನಲ್ಲೆಯಲ್ಲಿ ವಿವಿಧ ಪೂಜಾ ಕಾರ್ಯಗಳು ನೆರವೆರಿದ್ದು ಊಟೋಪಚಾರದ ವ್ಯವಸ್ಥೆಯನ್ನು ತಮ್ಮ ಟ್ರಸ್ಟ್ ಮೂಲಕ ಕಲ್ಪಿಸಿದರು.
ಈ ಸಂದರ್ಭದಲ್ಲಿ ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಕೋಟ ಗ್ರಾಮಪಂಚಾಯತ್ ಸದಸ್ಯ ಪ್ರದೀಪ್ ಸಾಲಿಯಾನ್, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್,
ಸುರೇಶ್ ಮರಕಾಲ ಪತ್ನಿ ಸವಿತಾ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.











