ಎಸ್.ಡಿ.ಎಂ.ಸಿ ಸಂಸ್ಥಾಪನಾ ದಿನಾಚರಣೆ: ಸರಕಾರಿ ಶಾಲೆಗಳ ಸಮೀಪ ರಸ್ತೆ ಸುರಕ್ಷಾ ಕ್ರಮದ ಅಭಿಯಾನಕ್ಕೆ ಕುಂದಾಪುರದಲ್ಲಿ ಚಾಲನೆ

0
383

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸರಕಾರಿ ಶಾಲೆಗಳು ಉಳಿದು, ಬೆಳೆಯಬೇಕೆಂಬ ಧ್ಯೇಯೋದ್ಧೇಶದಿಂದ ಹುಟ್ಟಿಕೊಂಡ ಶಾಲಾಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ‌ ಜಿಲ್ಲೆ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Click Here

ಕುಂದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಭಾಗದ ಹಂಪ್‌ಗೆ ಬಣ್ಣ ಬಳಿಯುವ ಮೂಲಕ ಕುಂದಾಪುರ ಸಂಚಾರ ಠಾಣೆ ಪಿಎಸ್ಐ ಪ್ರಸಾದ್ ಕುಮಾರ್ ಕೆ., ಹೆಡ್ ಕಾನ್ಸ್‌ಟೇಬಲ್ ಪ್ರಶಾಂತ್ ಪೂಜಾರಿ ಚಾಲನೆ ನೀಡಿದರು.

ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ‌ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಮಾತನಾಡಿ, ಗುಣಮಟ್ಟದ ಶಿಕ್ಷಣ, ಸರಕಾರಿ ಶಾಲೆಗಳಿಗೆ, ಎಸ್ ಡಿ ಎಂ ಸಿ ಮತ್ತು ದಾನಿಗಳ ಮೂಲಕ ಮೂಲಸೌಕರ್ಯಗಳನ್ನು ಒದಗಿಸುವುದು, ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಕೇಂದ್ರದ ಉದ್ದೇಶವಾಗಿದೆ. ಈ ಬಾರಿ ಸಂಸ್ಥಾಪನ ದಿನಾಚರಣೆ ಹಿನ್ನೆಲೆ ಉಡುಪಿ ಜಿಲ್ಲಾಧ್ಯಂತ 675 ಶಾಲೆಗಳ ಎಸ್.ಡಿ.ಎಂ.ಸಿ.ಗೆ ಮಾಹಿತಿ ನೀಡಿದ್ದು ಪ್ರತಿ ಶಾಲೆ ಸಮೀಪದ ರಸ್ತೆಯ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ಆಯಾಯ ಶಾಲೆ ಎಸ್‌ಡಿ‌ಎಂ‌ಸಿ, ಪೋಷಕರು ಹಾಗೂ ಸ್ಥಳೀಯರ ಮುತುವರ್ಜಿಯಲ್ಲಿ‌ ನಡೆಯಲಿದೆ. ಮಕ್ಕಳ ಹಾಗೂ ವಾಹನ ಸವಾರರ ಸುರಕ್ಷತೆ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ. ನಾಗರಾಜ್, ಪುರಸಭೆ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಬೈಂದೂರು ತಾಲೂಕು ಅಧ್ಯಕ್ಷ ಸಾಧಿಕ್ ಮಾವಿನಕಟ್ಟೆ, ಕಾಪು ತಾಲೂಕು ಉಸ್ತುವಾರಿ ಅಶ್ಫಕ್ ,ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ದೇವಾಡಿಗ , ಸ್ಥಳೀಯ ಮುಖಂಡರಾದ ಬಿ.ಎಸ್.ಎಫ್ ರಫೀಕ್ ಮೊದಲಾದವರಿದ್ದರು.

Click Here

LEAVE A REPLY

Please enter your comment!
Please enter your name here