ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜು ಶೈಕ್ಷಣಿಕವಾಗಿ ಪ್ರಗತಿಯ ಶಿಖರವನ್ನೇರಿ ಸಾಧನೆಗಳ ಮೇಲೆ ಸಾಧನೆಗಳನ್ನು ಸಾಧಿಸುತ್ತಾ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಈ ಶೈಕ್ಷಣಿಕ ವಿಷಯದಲ್ಲಿ ಸಾಧನೆಗಳ ಮಹಾಪೂರವನ್ನೇ ಮಾಡಿ ‘ಸಾಧನೆಗಳ ಸರದಾರ’ ಎನ್ನುವ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಬೋರ್ಡ್, ಜೆಇಇ, ಸಿಇಟಿ, ನೀಟ್, ಸಿಎ, ಸಿಎಸ್ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿಯೇ ಅತ್ಯುತ್ತಮ ರ್ಯಾಂಕ್ ಹಾಗೂ ಉತ್ತೀರ್ಣತೆಯ ಪ್ರಮಾಣವನ್ನು ಪಡೆದುದಲ್ಲದೇ ಎ13ರಂದು ನಡೆದ ಭಾರತೀಯ ಸೇನೆಯ ನೌಕಾಪಡೆ ಮತ್ತು ವಾಯುಪಡೆ (NDA)ಯನ್ನು ಸೇರಲು ಆರು ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುಂಪಾಗಿ ವಿಗಂಡಿಸಿ ಅವರಿಗೆ ವಿಶೇಷ ತರಬೇತಿ ನೀಡಿ ಅದರಲ್ಲಿ ಎಕ್ಸಲೆಂಟ್ ಸಂಸ್ಥೆಯ ಶ್ರೀಹರ್ಷ ಪಿ.ಎನ್ ಎನ್ನುವ ವಿದ್ಯಾರ್ಥಿಯು ಉತ್ತೀರ್ಣತೆಯನ್ನು ಹೊಂದುವ ಮೂಲಕ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ ಗರಿಗೆ ಅದ್ಭುತ ಕೀರ್ತಿಯನ್ನು ತಂದಿರುವುದು ಎಕ್ಸಲೆಂಟ್ ಶೈಕ್ಷಣಿಕ ಇತಿಹಾಸದಲ್ಲಿ ಇನ್ನೊಂದು ಮಹತ್ತರ ಸಾಧನೆಯಾಗಿದೆ.
ಈ ಎಕ್ಸಲೆಂಟ್ ಶೈಕ್ಷಣಿಕ ಸಾಧನೆಗೆ ಹೊಸ ಅಧ್ಯಾಯ ಬರೆದ ಶ್ರೀಹರ್ಷ ಪಿ.ಎನ್ ವಿದ್ಯಾರ್ಥಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.











