ಡಾ.ಬಿ.ಬಿ. ಹೆಗ್ಡೆ ಕಾಲೇಜು: ಎನ್.ಸಿ .ಸಿ ಘಟಕದ‌ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

0
372

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಸಿ .ಸಿ ಘಟಕದ‌ 2021-22 ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ, ಭಾರತೀಯ ಸೇನಾಪಡೆಯ ಯೋಧ ಪ್ರಶಾಂತ್ ದೇವಾಡಿಗ
ಉದ್ಘಾಟಿಸಿ ಶುಭಹಾರೈಸಿದರು. ಹಾಗೆಯೇ ಯುವ ಸಮುದಾಯಕ್ಕೆ ದೇಶ ಸೇವೆಗೈಯಲು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಯುವಕರು ಸೈನ್ಯ ಸೇರಲು ಯುವಕರು ಮಂದಾಗಬೇಕು. ನಮ್ಮ ಉಡುಪಿ- ಕುಂದಾಪುರ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದು‌ ಅವರು‌ ಹೇಳಿದರು. ತನ್ನ ಸೈನ್ಯದ ಅನುಭವವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುತ್ತಾ, ನಾನು‌ ಸೈನ್ಯ ಸೇರಲು ಸುಭಾಶ್ಚಂದ್ರ ಬೋಸ್ ರವರ ಆದರ್ಶವು ಪ್ರೇರಣೆ ಎಂದು ತಿಳಿಸಿದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತ್ತಾಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Click Here

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮತ್ತು ಯೋಧ ಪ್ರಶಾಂತ್ ದೇವಾಡಿಗ ಅವರನ್ನು ಸಂಸ್ಥೆಯ ವತಯಿಂದ ಗೌರವಿಸಲಾಯಿತು. ಎನ್‌ಸಿಸಿ ಅಧಿಕಾರಿ ಶಿವರಾಜ್ ಸಿ‌ ಸ್ವಾಗತಿಸಿದರು. ಸಹ ಸಂಯೋಜಕ ಸುಜಯ್ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌‌.

Click Here

LEAVE A REPLY

Please enter your comment!
Please enter your name here