ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಇಲ್ಲಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣದ ಜೊತೆಜೊತೆಗೆ ನೈಸರ್ಗಿಕ ವಾತಾವರಣವನ್ನೂ ಸೃಷ್ಟಿಸುವ ಸಲುವಾಗಿ ಕಾಲೇಜಿಗೆ ಹೂವಿನ ಕುಂಡಗಳನ್ನು ದೇಣಿಗೆಯಾಗಿ ನೀಡಿದರು. ಒಂದೊಂದು ಕುಂಡವನ್ನು ಖರೀದಿಸಿಬಹಳ ವಿಶಿಷ್ಟ ರೀತಿಯ ಗಿಡಗಳಾದ ಝಿಝಿ, ಸ್ನೇಕ್, ಅಗ್ಲೋನಿಮ, ಕೆಲೆತಿಯಾ, ಅರೇಲಿಯ ಮುಂತಾದ ಗಿಡಗಳನ್ನು ನೆಟ್ಟು ಅವುಗಳನ್ನು ಸಂಸ್ಥೆಗೆ ನೀಡಿತಾವೇ ಪಾಲಿಸಿ ಪೋಷಿಸುವಾಗಿ ಭರವಸೆ ನೀಡಿದರು. ಗಿಡಗಳನ್ನು ಸ್ವೀಕರಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್. ನಾಯಕ್ ಈ ಸಂದರ್ಭದಲ್ಲಿ ಮಾತನಾಡುತ್ತ ವಿದ್ಯಾರ್ಥಿಗಳ ಪ್ರಕೃತಿ ಬಗೆಗಿನ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಹಾಗೂ ನಮ್ಮ ವಿದ್ಯಾರ್ಥಿಗಳು ಅದ್ಬುತವನ್ನೇ ಸೃಷ್ಟಿಸಬಲ್ಲರುಎಂದು ನುಡಿದರು.
ಐಕ್ಯೂಎಸಿ ಹಾಗೂ ಇಕೋ ಕ್ಲಬ್ ಸಂಚಾಲಕ ನಾಗರಾಜ ಯು., ಗ್ರಂಥಪಾಲಕ ರವಿಚಂದ್ರ ಹೆಚ್‍ಎಸ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಸಂತೋಷ ನಾಯ್ಕ್, ಡಾ.ಗೀತಾ ಎಂ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











