ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳಿಸಿ ರಾಜ್ಯಕ್ಕೆ 6ನೇ ರ್‍ಯಾಂಕ್ ಗಳಿಸಿದ್ದು ತನ್ನ ಉತ್ತಮ ಸಾಧನೆಯಿಂದ ಸಂತಸ ಗೊಂಡಿರುವ ವಿದ್ಯಾರ್ಥಿನಿ ಮಾತನಾಡುತ್ತಾ ತನ್ನ ಈ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರವೇ ಕಾರಣ. ಶಾಲೆಯಲ್ಲಿನ ಉತ್ತಮ ಬೋಧನೆ, ಪರೀಕ್ಷಾ ಸಮಯದಲ್ಲಿ ಶಾಲೆಯಲ್ಲಿ ಆಯೋಜಿಸಿದ ವಿಶೇಷ ಕಾರ್ಯಗಾರಗಳು, ನಿರಂತರವಾಗಿ ಆಯೋಜಿಸಿದ ಪೂರ್ವ ತಯಾರಿ ಪರೀಕ್ಷೆಗಳು, ಸಾಮರ್ಥ್ಯ ಆಧಾರಿತ ಗುಂಪು ರಚನೆ ಮತ್ತು ಚಟುವಟಿಕೆಗಳು ತುಂಬಾ ಉಪಯೋಗವಾಗಿದ್ದು ಉತ್ತಮ ಸಾಧನೆಗೆ ಸಹಾಯವಾಯಿತು” ಎಂದಳು. ಮುಂದೆ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ವೈದ್ಯೆಯಾಗುವ ಕನಸನ್ನು ಹೊಂದಿದ್ದಾಳೆ.











