ಕುಂದಾಪುರ :ಎಸ್.ಎಸ್.ಎಲ್.ಸಿ. ಫಲಿತಾಂಶ – ಟಾಪ್ 10ರ ಒಳಗೆ 6 ರ‍್ಯಾಂಕ್‌

0
625

Click Here

Click Here

ಕುಂದಾಪುರದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಶಾಲೆ ರಾಜ್ಯಕ್ಕೆ 3ನೇ ರ‍್ಯಾಂಕ್‌

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ 2025 ರಲ್ಲಿ ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ರೊಳಗಿನ 6 ರ್‍ಯಾಂಕ್ಗಳನ್ನು ಪಡೆದು ಅಮೋಘ ಸಾಧನೆಗೈದಿದ್ದಾರೆ.

Click Here

ಸಂಸ್ಥೆಯ ವಿದ್ಯಾರ್ಥಿನಿ ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸುವುದರ ಮೂಲಕ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿದ್ದಾಳೆ. ಸಂಸ್ಥೆಯ ವಿದ್ಯಾರ್ಥಿ ಆಯುಷ್ ಯು ಶೆಟ್ಟಿ 625ಕ್ಕೆ 622 ಅಂಕ ಗಳಿಸುವುದರ ಮೂಲಕ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದಿದ್ದಾನೆ.ಸಂಸ್ಥೆಯ ವಿದ್ಯಾರ್ಥಿನಿ ಅನುಶ್ರೀ 625ಕ್ಕೆ 620 ಅಂಕ ಗಳಿಸುವುದರ ಮೂಲಕ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದಿದ್ದಾಳೆ. ಅಪೇಕ್ಷಾ ಶೆಟ್ಟಿ 625ಕ್ಕೆ 619 ಅಂಕಗಳಿಸುವುದರ ಮೂಲಕ ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದಿದ್ದಾಳೆ. ಸುಖಿ ಎಸ್. ಶೆಟ್ಟಿ 625 ಕ್ಕೆ 618 ಅಂಕಗಳಿಸುವುದರ ಮೂಲಕ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದಿದ್ದಾಳೆ. ದರ್ಶನ್ ಕೆ.ಯು. 625 ಕ್ಕೆ 616 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ 10ನೇ ರ್‍ಯಾಂಕ್ ಪಡೆದಿದ್ದಾನೆ.
ರೀಮಾ ಪ್ರಕಾಶ್ ಶೆಟ್ಟಿ 625ಕ್ಕೆ 615 ಅಂಕ, ಎಸ್.ಆರ್. ರಿತೇಶ 615, ಅಭಿಲಾಷ್ 613, ಆದಿತ್ಯ ಬಸವರಾಜ್ 613, ಕನ್ನಿಕ 613, ವೈಷ್ಣವಿ 606, ನಯನ ಕೆ 604, ರಜತಕುಮಾರ್ ಶೆಟ್ಟಿ 604, ಮೇದಿತ್ ಶೆಟ್ಟಿ 602, ಅವಿನಾಶ್ ಉಡುಪ 599, ಸನ್ವಿತ್ ಎಸ್. ಶೆಟ್ಟಿ 599, ಆಶಿಕ್ ಯುಕೆ 597, ಋತು ರಾಜಶೇಖರ್ 596, ಅಂಕಿತ ಕೆದ್ಲಾಯ 594 , ಶ್ರೀಶ 594, ಶನಾಯ 593, ಸ್ಪಂದನ 591, ಸೃಷ್ಟಿ 591, ಮಿಶಾ ಶೆಟ್ಟಿ 589, ಶಶಾಂಕ್ 588, ತನ್ಮಯ್ 588, ಆಕಾಂಕ್ಷ 587, ನಚಿಕೇತ್ 587, ಪ್ರೇಕ್ಷಾ 587, ರಿತ್ವಿಜ್ 585, ವಿಕಾಸ್ ಜೆ.ಕೆ. 584, ಆರ್ಯನ್ 583, ಪಾರ್ಥಸಾರಥಿ 582, ಸುವಾನ್ 581, ರೋಹನ್ 580, ಶ್ರೇಯಾ ಬಿ 580, ತನ್ಮಯ್ ಜೆ. ರಾವ್ 580 ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆ ಬರೆದ 107 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 21 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ ಅಂಕ ಪಡೆದರೆ ,62 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Click Here

LEAVE A REPLY

Please enter your comment!
Please enter your name here