ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಸಾಸ್ತಾನ ಮತ್ತು ಬ್ರಹ್ಮಾವರ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

0
635

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಹಿರಿಯರು ವೃದ್ದರೊಂದಿಗೆ ಕ್ರಿಸ್ಮಸ್ ಆಚರಿಸುವುದರೊಂದಿಗೆ ಅವರ ಮುಖದಲ್ಲಿ ನಗುವನ್ನು ಕಾಣುವುದೇ ನಿಜವಾದ ಸಂಭ್ರಮ ಎಂದು ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೆರಾಲ್ಡ್ ಪಿಂಟೊ ಹೇಳಿದರು.

ಅವರು ಶನಿವಾರ ಸಾಸ್ತಾನದ ನಿತ್ಯ ಸಹಾಯ ಮಾತಾ ವೃದ್ಧಾಶ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಸಾಸ್ತಾನ ಘಟಕದ ಸಹಯೋಗದಲ್ಲಿ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಡೀ ವಿಶ್ವವೇ ಜಾತಿ ಮತಗಳ ಬೇದವಿಲ್ಲದೆ ಆಚರಿಸುವ ಕ್ರಿಸ್‍ಮಸ್ ಹಬ್ಬದ ತಿರುಳಿರುವುದು ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲಿ. ಇದೇ ಶಾಂತಿ ಪ್ರೀತಿ ಸಹನೆ ದೀನತೆ ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲಿ ಎಂದು ಅವರು ಶುಭ ಹಾರೈಸಿದರು.

Click Here

ಈ ವೇಳೆ ಸಂಘಟನೆಯ ವತಿಯಿಂದ ವೃದ್ಧಾಶ್ರಮದ ನಿವಾಸಿಗಳಿಗೆ ಕ್ರಿಸ್ಮಸ್ ತಿಂಡಿ ಕುಸ್ವಾರನ್ನು ವಿತರಿಸಲಾಯಿತು. ಸಾಸ್ತಾನ ಘಟಕದ ಗಾಯನ ಮಂಡಳಿಯ ಸದಸ್ಯರು ಕ್ರಿಸ್ಮಸ್ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿತ್ಯ ಸಹಾಯ ಮಾತಾ ವೃದ್ಧಾಶ್ರಮದ ಸಿಸ್ಟರ್ ಬ್ಲಾಂದಿನಾ, ಸ್ಥಳೀಯ ಜೀಜಸ್ ಮೇರಿ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಗೊರೆಟ್ಟಿ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಪ್ರಧಾನ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ಸಾಸ್ತಾನ ಘಟಕದ ಅಧ್ಯಕ್ಷರಾದ ಸಿಂತಿಯಾ ಡಿ?ಸೋಜಾ, ಕಾರ್ಯದರ್ಶಿ ಜಾನೆಟ್ ಬಾಂಜ್, ಕೇಂದ್ರಿಯ ಸಮಿತಿಯ ಪದಾಧಿಕಾರಿಗಳಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ಸಂತೋಷ್ ಕರ್ನೆಲಿಯೊ ಹಾಗೂ ಇತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here