ಕುಂದಾಪುರ ಮಿರರ್ ಸುದ್ದಿ…
ಕೋಟ: ಹೀಗೊಂದು ಕ್ಯಾಲೆಂಡರ್ ಸೃಷ್ಠಿಸಿದೆ ಜನತಾ ಸಂಸ್ಥೆ ಹೌದು ಇಲ್ಲಿನ ಜನತಾ ಫಿಶ್ ಮಿಲ್ ಅಂಡ್ ಆಯಿಲ್ ಪ್ರಾಡಕ್ಟ್ಸ್ ಸಂಸ್ಥೆ ಗ್ರಾಮೀಣ ಸೊಗಡಿಗೆ ಬಣ್ಣ ಬಡಿಯುವ ಕೆಲಸ ಮಾಡುತ್ತಿದೆ.



ಪ್ರತಿವರ್ಷ ಜನತಾ ಸಂಸ್ಥೆಯಿಂದ ಸ್ಥಳೀಯ ಗ್ರಾಮೀಣ ಭಾಗವಾದ ಕೋಟ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ, ವ್ಯವಹಾರಸ್ಥ ಕ್ಷೇತ್ರಗಳಿಗೆ ಉಚಿತವಾಗಿ ಕ್ಯಾಲೆಂಡರ್ ವಿತರಿಸುತ್ತಾರೆ. ಆದರೆ ಅವರು ಸೃಷ್ಠಿಸುವ ಕ್ಯಾಲೆಂಡರ್‍ನಲ್ಲಿ ಒಂದಲ್ಲ ಒಂದು ವಿಶೇಷತೆ ಇರುತ್ತದೆ. ಆದರೆ ಈ ಬಾರಿ ವಿಶೇಷವೆಂಬಂತೆ ಗ್ರಾಮೀಣ ಜೀವನ ಪದ್ಧತಿಯ ಪರಿಕರಗಳನ್ನು ತನ್ನ ಸಂಸ್ಥೆಯ ಕ್ಯಾಲೆಂಡರ್‍ನಲ್ಲಿ ಪ್ರಕಟಿಸಿ ಜನಮನ್ನಣೆ ಗಳಿಸಿದೆ. ಪ್ರಸ್ತುತ ವಿದ್ಯಮಾನಗಳಲ್ಲಿ ನಮ್ಮ ಹಿರಿಯರು ಬಳಸುತ್ತಿ ಅನಾಧಿ ಕಾಲದ ವಸ್ತುಗಳನ್ನು ಮುಂದಿನ ತಲೆಮಾರಿಗೆ ನೆನಪಿಸುವ ಅಥವಾ ಉಳಿಸಿಕೊಳ್ಳವ ಮಹಾನ್ ಕೆಲಸಕ್ಕೆ ಕೈಹಾಕಿದ್ದಾರೆ. ಹೆಚ್ಚಾಗಿ ಇಂದಿನ ಕಾಲಘಟ್ಟದಲ್ಲಿ ಸಂಸ್ಕಾರ, ಸಂಸ್ಕ್ರತಿ,ಆಚಾರ ವಿಚಾರಗಳು ಮರೆಯಾಗುತ್ತಿರುವ ದಿನಗಳಲ್ಲಿ ಇಂಥಹ ಸಂಸ್ಥೆಗಳ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದೊಂದು ಮಾದರಿ ಎಂದರೂ ತಪ್ಪಾಗಲಾರದು.
ಪ್ರಚುರಪಡಿಸಿದ ಪರಿಕರಗಳು
ಪ್ರಾರಂಭದ ಜನವರಿ ತಿಂಗಳ ಮೊದಲ ಪುಟದಲ್ಲಿ ಮರಾಯಾಗುತ್ತಿರುವ ಗ್ರಾಮ್ಯ ಭಾಷೆಯಯಲ್ಲಿ ತಿರಿ (ಭತ್ತದಕಣಜ )ಫೆಬ್ರವರಿ ತಿಂಗಳಲ್ಲಿ ಹೆಚ್ಚಾಗಿ ಗೃಹಪ್ರವೇಶಕ್ಕೆ ಕೊಂಡ್ಯೊಯುವ ಅಕ್ಕಿಮುಡಿ, ಮಾಚ್9ನಲ್ಲಿ ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ಹೆಚ್ಚಾಗಿ ಉಪಯೋಗಿಸುವ ಗೆರ್ಸಿ ಮತ್ತು (ಕುಕ್ಕಿ- ಕುಂದಾಪ್ರ ಭಾಷೆ) ಎಪ್ರಿಲ್ ಮಾಸದಲ್ಲಿ ಅನ್ನ ಬಸಿಯುವ ಸಿಬ್ಲ್ , ಬುಟ್ಟಿ,ಮೇ ನಲ್ಲಿ ಧಾನ್ಯ ಶೇಖರಿಸುವ ಪತ್ತಾಸ್( ಮರದ ಪೆಟ್ಟಿಗೆ) ಜೂನ್ ಪುರಾತನ ಕಾಲದಲ್ಲಿ ಉಳಿಮೆಗೆ ಉಪಯೋಗಿಸುವ ಮರದ ನೇಗಿಲು,ಜುಲೈನಲ್ಲಿ ವಾಹನಗಳಿಲ್ಲದ ಕಾಲದಲ್ಲಿ ಬಳಸಲಾಗುತ್ತಿರುವ ಎತ್ತಿನಗಾಡಿ, ಅಗಸ್ಟ್ ಮಾಸದಲ್ಲಿ ಅಕ್ಕಿ ಅಳೆಯುವ ಸಾಧನ ಸೇರು,ಸಿದ್ಧಿ, ಸಪ್ಟೆಂಬರ್ ಭತ್ತ ಅಳೆಯುವ ಕಳ್ಸಿಗಿ,ಅಕ್ಟೋಬರ್‍ನಲ್ಲಿ ಮಳೆಗಾಲದಲ್ಲಿ ನಾಟಿ ಮಾಡುವ ಸಂದರ್ಭದಲ್ಲಿ ಮಳೆ ಗಾಳಿಯಿಂದ ರಕ್ಷಿಸುವ ಪ್ರಕೃತಿದತ್ತ ನಿರ್ಮಿತ ಗೊರ್ಬ, ಒಲಿ ಕೊಡೆ,ನವೆಂಬರ್ ನಲ್ಲಿ ಸಾಂಬಾರು ಕೆಡೆಯುವ (ಪದಾರ್ಥ ) ಕಡೆಯುವ ಕಲ್ಲು, ಡಿಸೆಂಬರ್ ಯಂತ್ರವೇ ಇಲ್ಲದ ಕಾಲಘಟ್ಟದಲ್ಲಿ ಉಪಯೋಗಿಸುತ್ತಿರುವ ಒರ್ಲು ಮತ್ತು ಒನಕೆ ಮೂಲಕ ಭತ್ತದ ಸಿಪ್ಪೆ ಬೇರ್ಪಡಿಸುವ ಕಾರ್ಯವನ್ನು ಕ್ಯಾಲೆಂಡರ್‍ನಲ್ಲಿ ಪ್ರಚುರಪಡಿಸಿದ್ದಾರೆ. ಇದೊಂದು ಅದ್ಭುತ ಎಂದರೆ ಅತಿಶಯೋಕ್ತಿಯಲ್ಲ ಏಕೆಂದರೆ ಕಳೆದ ವರ್ಷ ಗ್ರಾಮೀಣ ಭಾಗದ ತಿಂಡಿ ತಿನಿಸುಗಳನ್ನು ಹಾಗೇ 2020ರಲ್ಲಿ ಹಳ್ಳಿ ಆಟಗಳು2019 ಮನೆಮದ್ದು ವಸ್ತುಗಳನ್ನು ಬಿತ್ತರಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿ ದೂರವಾಣಿ, ಆರೋಗ್ಯ ಕವಚ ಮಾಹಿತಿ ಒಳಗೊಂಡಿದೆ
ಈ ಕ್ಯಾಲೆಂಡರ್ ಮತ್ತೊಂದು ವಿಶೇಷತೆ ಏನೆಂದರೆ ಅಪಘಾತ ಸಂದರ್ಭದಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ಸ್ಥಳೀಯ ಆಂಬ್ಯುಲೇನ್ಸ್,ಜಿಲ್ಲಾ ಮಟ್ಟದ ಅಧಿಕಾರಿಗಳ ಸೇರಿದಂತೆ ಇಲಾಖೆಗಳ,ಸ್ಥಳೀಯಾಡಳಿತದ ದೂರವಾಣಿ ಸಂಖ್ಯೆ,ಪುಣ್ಯ ಕ್ಷೇತ್ರಗಳ,ಶೈಕ್ಷಣಿಕ ಸಂಸ್ಥೆ,ರಕ್ತನಿಧಿಕೇಂದ್ರ,ಆರೋಗ್ಯ ಕೇಂದ್ರ,ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪೂರ್ಣ ಮಾಹಿತಿ ದೂರವಾಣಿ ಸಂಖ್ಯೆ ಒಳಗೊಂಡಿದೆ.
ಪಕೃತಿದತ್ತ ಬಣ್ಣ ಲೇಪನ
ಕ್ಯಾಲೆಂಡರ್ ಗೆ ನವನವೀನ ಬಣ್ಣಗಳಲ್ಲಿ ನಾವುಗಳು ಕಾಣುತ್ತೇವೆ ಆದರೆ ಜನತಾ ಸಂಸ್ಥೆಯ ಕ್ಯಾಲೆಂಡರ್‍ನಲ್ಲಿ ಪ್ರಕೃತಿದತ್ತ ಹಸಿರು ಬಣ್ಣದ ಪರಿಸರಸ್ನೇಹಿ ಬಣ್ಣವನ್ನು ಲೇಪಿಸಲಾಗಿದೆ.
ಜನತಾ ಸಂಸ್ಥೆ ಪ್ರತಿವರ್ಷ ನೀಡಲ್ಪಡುವ ಕ್ಯಾಲೆಂಡರ್ ಒಂದೊಂದು ತರಹದ ವಿಶೇಷತೆ ಒಳಗೊಂಡಿರುತ್ತದೆ.ಅದು ಸಹ ನಮ್ಮ ಹಿರಿಯ ತಲೆಮಾರಿನಲ್ಲಿ ಬಳಸಲಾಗುತ್ತಿರುವ ವಸ್ತುಗಳನ್ನು ಇಂದಿನ ತಲೆಮಾರಿಗೆ ಊಣಬಡಿಸುತ್ತಿದೆ,ಅಲ್ಲದೆ ಆರೋಗ್ಯ ವರ್ಧಕ ತಿನಿಸು,ನಮ್ಮ ಗ್ರಾಮೀಣಭಾಗದ ಕ್ರೀಡೆ,ಕೃಷಿ ಸಂಬಂಧಿಸಿದ ವಿಷಯಗಳನ್ನು ಬಿತ್ತರಿಸಿದೆ ಇದು ನಮ್ಮ ನಮ್ಮ ಮನೆಯಲ್ಲಿ ಜೋಡಿಸಲು ತುಂಬಾ ಸಂತೋಷವಾಗುತ್ತಿದೆ
ಅಜಿತ್ ಆಚಾರ್ಯ ಕೋಟ ಉಪನ್ಯಾಸಕ ಬಿದ್ಕಲ್‍ಕಟ್ಟೆ ಐಟಿಐ ಕಾಲೇಜು ಕುಂದಾಪುರ
ಸಂಪ್ರದಾಯ ಮತ್ತು ಸಂಸ್ಕಾರಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸರಾಗವಾಗಿ ಹರಿದಾಗ ನಮ್ಮ ಮುಂದಿನ ಜನಾಂಗಕ್ಕೆ ಅದರ ಮೇಲಿನ ಗೌರವ ಇಮ್ಮಡಿಯಾಗುತ್ತದೆ ಆ ನಿಟ್ಟಿನಲ್ಲಿ ಸಂಸ್ಕಾರ ಮತ್ತು ಸಂಪ್ರದಾಯಗಳಂತೆ ಇರುವ ನಮ್ಮ ಆಹಾರ, ಆಟಗಳು, ಪರಿಸರದ ಬಗ್ಗೆ,ಕೃಷಿಪದ್ದತಿಯ ಆಚರಣೆಗಳನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದೆ- ಆನಂದ್ ಸಿ ಕುಂದರ್ ಎಂ.ಡಿ ಜನತಾ ಫಿಶ್‍ಮೀಲ್ ಅಂಡ್ ಆಯಿಲ್ ಪ್ರಾಡೆಕ್ಟ್ ಕೋಟ











